ಬಸವೇಶ್ವರ ವೃತ್ತದ ಬಳಿ ಮದ್ಯಪಾನ ನಿಷೇಧಕ್ಕೆ ಆಗ್ರಹ

26SAVADATTI1
Published on

ಸವದತ್ತಿ: ಪಟ್ಟಣದ ಕರೀಕಟ್ಟಿ ಕ್ರಾಸ್​ನಲ್ಲಿರುವ ವಿಶ್ವಗುರು ಬಸವೇಶ್ವರ ವೃತ್ತದ ಸುತ್ತಲೂ ಮಾಂಸಹಾರ, ಎಗ್​ರೈಸ್​, ಗುಟಕಾ, ಮದ್ಯಪಾನ ಹಾಗೂ ಧೂಮಪಾನ ನಿಷೇಧಿಸುವಂತೆ ಒತ್ತಾಯಿಸಿ ಇಲ್ಲಿನ ಲಿಂಗಾಯತ ಸಂಟನೆಗಳ ವತಿಯಿಂದ ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರಭಾವತಿ ಜಿ. ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.

12ನೇ ಶತಮಾನದಲ್ಲಿ ಪ್ರಾಣಿ ಬಲಿ, ಮದ್ಯಪಾನ ಮತ್ತು ಧೂಮಪಾನ ವಿರೋಧಿಸಿ ಸಮಾಜ ಸುಧಾರಣೆಗೆ ಶ್ರಮಿಸಿದ್ದ ಬಸವೇಶ್ವರರ ಮೂರ್ತಿ ಬಳಿ ಮಾಂಸಹಾರ ಹಾಗೂ ಎಗ್​ರೈಸ್​ ಮಾಡುತ್ತಿರುವುದು ಖೇದಕರ. ಕೂಡಲೇ ಇದನ್ನು ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ವಿವಿಧ ಮಠಾಧೀಶರ ಮುಂದಾಳತ್ವದಲ್ಲಿ ತೀವ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಆಗ್ರಹಿಸಿದರು.

ಬಸವರಾಜ ಕಪ್ಪಣ್ಣವರ, ನಾಗಪ್ಪ ಬೆಂಡಿಗೇರಿ, ಎಸ್​.ಡಿ.ಪಾಶ್ಚಾಪುರ, ಮಲ್ಲಿಕಾರ್ಜುನ ಕಲಾದಗಿ, ಚಂದ್ರಪ್ಪಣ್ಣ ಉಳ್ಳಿಗೇರಿ, ರಾಜಶೇಖರ ನಿಡವಣಿ, ಬಸವರಾಜ ಪುಟ್ಟಿ, ರಮೇಶ ಜಾಧವ, ಮಹಾಂತೇಶ ಪ್ರಭುನವರ, ಈರಣ್ಣ ಪಟ್ಟಣಶೆಟ್ಟಿ, ನಾಗಪ್ಪ ಪ್ರಭುನವರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net