

ಬೀದರ್: ತಾಲೂಕಿನ ಮರಕುಂದಾ ಗ್ರಾಮದಲ್ಲಿ ಬಸವ ಜಯಂತಿಯಂದು ಜಗಜ್ಯೋತಿ ಬಸವೇಶ್ವರರ ಬೃಹದಾಕಾರದ ಪುತ್ಥಳಿಯನ್ನು ಹಾರಕೂಡ ಹಿರೇಮಠದ ಪೂಜ್ಯರಾದ ಡಾ. ಚೆನ್ನವೀರ ಶಿವಾಚಾರ್ಯರು ಅನಾವರಣಗೊಳಿಸಿದರು.
ಬಸವ ಜಯಂತಿ ಹಾಗೂ ಬಸವೇಶ್ವರ ಮೂರ್ತಿ ಅನಾವರಣ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಹಬ್ಬದ ವಾತಾವಣರ ನಿರ್ಮಾಣಗೊಂಡಿತು. ಮೂರ್ತಿ ಅನಾವರಣ ಕ್ಕೆ ಕಳೆದೊಂದು ವಾರದಿಂದ ಸಿದ್ದತೆಗಳು ನಡೆದಿದ್ದವು. ಹಾರಕೂಡ ಪೂಜ್ಯರು ಪೂಜೆ ನೆರವೇರಿಸಿ ಮೂರ್ತಿ ಅನಾವರಣಗೊಳಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ವೀರಾರೆಡ್ಡಿ ಮಾಲಿಪಾಟೀಲ,ನಾಗಶೆಟ್ಟಿ ಕೋರಿ, ನಾಗಶೆಟ್ಟಿ ಚಾಮಾ, ಶರಣಪ್ಪ ಪಿನ್ನಾ , ಬಸವಣಪ್ಪ ಕೋರಿ, ನರೇಂದ್ರ ಶೇರಿಕಾರ ಮಲ್ಲಪ್ಪ ಡಾಕುಳಗಿ, ನಾಗ ಶೆಟ್ಟಿ ಡಾಕುಳಕಿ ಗ್ರಾಮದ ಪ್ರಮುಖರು , ಗ್ರಾ.ಪಂ ಸದಸ್ಯರು ಸೇರಿದಂತೆ ಅನೇಕರು ಹಾಜರಿದ್ದರು.