

ಬೆಂಗಳೂರು: ವಯೋಸಹಜ ರೀತಿಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಸಾಕು ನಾಯಿ ಸನ್ನಿ ಸಾವಿಗೀಡಾಗಿದೆ.
ಸನ್ನಿ ಬೊಮ್ಮಾಯಿ ಕುಟುಂಬದ ಪ್ರೀತಿಯ ನಾಯಿ. ಮನೆಯ ಖುಷಿಗೆ ಸದಾ ಸಾಕ್ಷಿಯಾಗಿತ್ತು. ಬೊಮ್ಮಾಯಿ ಕುಟುಂಬದ ಭಾಗವೇ ಆಗಿತ್ತು. ಪ್ರೀತಿಯ ನಾಯಿ ಮರೆಯಾದ ಹಿನ್ನೆಲೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಕಣ್ಣೀರಿಟಿದ್ದಾರೆ.
ಸ್ವತಃ ಬೊಮ್ಮಾಯಿ ಅವರೇ ಮುಂದೆ ನಿಂತು ಅದರ ಕಾರ್ಯವನ್ನು ಮಾಡಿದ್ದಾರೆ. ಸನ್ನಿ ಸಾವಿನ ಬಗ್ಗೆ ಜಾಲತಾಣದಲ್ಲಿ ಬರೆದುಕೊಂಡಿರುವ ಬೊಮ್ಮಾಯಿ, ಸನ್ನಿ ಅಗಲಿಕೆಯಿಂದ ಮನೆಯವರೆಲ್ಲರಿಗೂ ನೋವಾಗಿದೆ. ಮನೆಯ ಹಾಗೂ ಮನೆಗೆ ಬರುವ ಎಲ್ಲರೊಂದಿಗೆ ಅತ್ಯಂತ ಪ್ರೀತಿಯಿಂದ ಬೆರೆಯುತ್ತಿತ್ತು ಎಂದು ಹೇಳಿದ್ದಾರೆ.