ಇನ್ನೊಂದು ಗಂಟೆಯಲ್ಲಿ ಖಾತೆ ಹಂಚಿಕೆ ಪ್ರಕಟ: ಸಿಎಂ ಬೊಮ್ಮಾಯಿ

bommai
Published on

ಬೆಂಗಳೂರು: ಇನ್ನೊಂದು ಗಂಟೆಯಲ್ಲಿ ಖಾತೆ ಹಂಚಿಕೆ ಪ್ರಕಟಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಆರ್ ಟಿ ನಗರದಲ್ಲಿರುವ ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠದ ಬೆಂಗಳೂರು ಶಾಖೆಗೆ ಸಿಎಂ ಬೊಮ್ಮಾಯಿ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ವರಿಷ್ಠರು ಖಾತೆ ಹಂಚಿಕೆ ಪಟ್ಟಿಯನ್ನು ಫೈನಲ್ ಮಾಡಿದ್ದಾರೆ. ಇನ್ನೊಂದು ಗಂಟೆಯಲ್ಲಿ ರಾಜಭವನದಿಂದ ಅಧಿಕೃತವಾಗಿ ಪಟ್ಟಿ ಪ್ರಕಟವಾಗಲಿದೆ. ಯಾವೊಬ್ಬ ಸಚಿವರು ಕೂಡ ಇಂಥದ್ದೇ ಖಾತೆ ಬೇಕು ಎಂದು ಪಟ್ಟು ಹಿಡಿದಿಲ್ಲ. ಖಾತೆ ಹಂಚಿಕೆ ಬಗ್ಗೆ ಯಾವುದೇ ಗೊಂದಲವಿಲ್ಲ. ರಾತ್ರಿ ಪ್ರಕಟಣೆ ಬೇಡ ಎಂಬ ಸಲಹೆ ಬಂದ ಹಿನ್ನೆಲೆಯಲ್ಲಿ ಇನ್ನೂಂದು ಗಂಟೆಯಲ್ಲಿ ಪ್ರಕಟವಾಗಲಿದೆ ಎಂದು ಹೇಳಿದರು.

ಕೋವಿಡ್ ಸಂಬಂಧ ನಿನ್ನೆ ಸಭೆ ಮಾಡಿದ್ದೇವೆ. ಮಾರ್ಗಸೂಚಿ ಪ್ರಕಟ ಮಾಡಿದ್ದೇವೆ. ಮಾರ್ಗಸೂಚಿಗಳ ಪಾಲನೆಗೆ ಕ್ರಮ ವಹಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಸಿಎಂ ಬೊಮ್ಮಾಯಿ ಅವರು ತಿಳಿಸಿದರು.

ಸಿಎಂ ಬೆನ್ನುಬಿಡದ ಎಂಟಿಬಿ ನಾಗರಾಜ್

ನಿನ್ನೆ ಇಂದಲೂ ಸಿಎಂ ಸುತ್ತಮುತ್ತ ಸುತ್ತಾಡುತ್ತಿರುವ ಎಂಟಿಬಿ ನಾಗರಾಜ್, ಅಬಕಾರಿ ಹಾಗೂ ಪೌರಾಡಳಿತ ಖಾತೆ ಬೇಡ ಎಂದು ಒತ್ತಾಯ ಮಾಡುತ್ತಿದ್ದಾರೆಂಬ ಮಾಹಿತಿ ಬಂದಿದೆ. ಅಬಕಾರಿಯಲ್ಲಿ ಹೆಸರು ಮಾಡಲು ಆಗಲ್ಲ. ಬೇರೆ ಖಾತೆಯ ಜವಾಬ್ದಾರಿ ಕೊಡಿ ಎಂದು ಸಿಎಂ ಬೊಮ್ಮಾಯಿ ದುಂಬಾಲು ಬಿದ್ದಿದ್ದಾರೆನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net