ನ.20ಕ್ಕೆ ಬಸವಣ್ಣನವರ ವಚನ ಕಂಠಪಾಠ ಸ್ಪರ್ಧೆ: ವಿಜೇತರಿಗೆ ನಗದು ಬಹುಮಾನ

Basavanna
Published on

ಬಸವಕಲ್ಯಾಣ: ಸುಶೀಲಾದೇವಿ ಡಾ.ಬಿ.ವಿ.ಪಟೇಲ್​ ಸ್ಮರಣಾರ್ಥ ಅನುಭವ ಮಂಟಪದಲ್ಲಿ ನ.20ರಂದು ಬೆಳಗ್ಗೆ 10ಕ್ಕೆ ಬಸವಣ್ಣನವರ ವಚನಗಳ ಕಂಠಪಾಠ ಏರ್ಪಡಿಸಲಾಗಿದೆ.

ಹೆಚ್ಚು ವಚನಗಳನ್ನು ಕಂಠಪಾಠ ಹೇಳಿ ವಿಜೇತರಾದವರಿಗೆ ಪ್ರಥಮ 10 ಸಾವಿರ ರೂ., ದ್ವಿತೀಯ 5000 ರೂ. ಹಾಗೂ ತೃತೀಯ 2000 ರೂ. ನಗದು ಬಹುಮಾನ ಮತ್ತು ಪ್ರಶಸ್ತಿಪತ್ರ ನೀಡಲಾಗುವುದು. ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿ ಪತ್ರ ನೀಡುವುದಾಗಿ ಅನುಭವ ಮಂಟಪ ಟ್ರಸ್ಟ್​ ಅಧ್ಯಕ್ಷರಾದ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಸಕ್ತರು ನ.20ರಂದು ಅಥವಾ ಅದಕ್ಕೂ ಮುನ್ನ ಹೆಸರು ನೋಂದಾಯಿಸಬೇಕು. ಎಲ್ಲರಿಗೂ ಉಚಿತ ಪ್ರವೇಶವಿದೆ. ದೂರದಿಂದ ಆಗಮಿಸುವ ಸ್ಪರ್ಧಿಗಳು ಖರ್ಚು-ವೆಚ್ಚವನ್ನು ಖುದ್ದಾಗಿ ಭರಿಸಬೇಕು. ವಸತಿ ಮತ್ತು ಪ್ರಸಾದ ವ್ಯವಸ್ಥೆ ಒದಗಿಸಲಾಗುವುದು. ಬಸವಣ್ಣನವರ ವಚನಗಳನ್ನು ಮಾತ್ರ ಹೇಳಬೇಕು. ಹೇಳುವ ವಚನಗಳನ್ನು ದಾಖಲಿಸಿದ ನೋಟ್​ಬುಕ್​ ಸಿದ್ಧಪಡಿಸಿಕೊಳ್ಳಬೇಕು. ಪೂರ್ತಿಯಾಗಿ ವಚನ ಹೇಳಬೇಕು. ವಚನ ನೆನಪಿಸಿಕೊಳ್ಳಲು ಮಧ್ಯದಲ್ಲಿ ಒಂದು ನಿಮಿಷ ಕಾಲಾವಕಾಶ ಮಾತ್ರ ಇರುತ್ತದೆ. ಹಿಂದಿನ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿದವರು ಮತ್ತೆ ಭಾಗವಹಿಸುವಂತಿಲ್ಲ. ವಯಸ್ಸಿನ ನಿರ್ಬಂಧ ಇರಲ್ಲ. ರಾಜ್ಯ ಮಟ್ಟದ ಸ್ಪರ್ಧೆ ಇದಾಗಿದ್ದರಿಂದ ರಾಜ್ಯದ ಎಲ್ಲ ಜಿಲ್ಲೆಯವರು ಭಾಗವಹಿಸಬಹುದು. ವಿಜೇತರಿಗೆ ನ.26 ಮತ್ತು 27ರಂದು ಆಯೋಜಿಸಿರುವ '43ನೇ ಶರಣ ಕಮ್ಮಟ- ಅನುಭವ ಮಂಟಪ ಉತ್ಸವ'ದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.

ಮಾಹಿತಿಗಾಗಿ ಶ್ರೀ ಶಿವಾನಂದ ಸ್ವಾಮೀಜಿ, ಸಂಚಾಲಕರು, ಅನುಭವ ಮಂಟಪ, ಬಸವಕಲ್ಯಾಣ ಮೊ.89719 48583 ಹಾಗೂ ವಿಶ್ವನಾಥ ಮುಕ್ತಾ (94494 58512), ಬಾಬು ಬೆಲ್ದಾಳ (98807 68662) ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net