More

    ಮಹಡಿ ಮೇಲೆ ಒಣ ಹಾಕಿದ್ದ ಬಟ್ಟೆಗೆ ತಾಗಿದ ಪಟಾಕಿ ಕಿಡಿ: ಧಗಧಗಿಸಿದ ಮನೆ

    ಚಿಕ್ಕಮಗಳೂರು: ದೀಪಾವಳಿ ಹಬ್ಬದ ಹಿನ್ನೆಲೆ ಪಟಾಕಿ ಹಚ್ಚಿ ಸಂಭ್ರಮಿಸುವಾಗ ಒಂದಲ್ಲ ಒಂದು ಅವಘಡ ಸಂಭವಿಸುತ್ತಲೇ ಇರುತ್ತೆ. ಯಾರೋ ಹಚ್ಚಿದ ಪಟಾಕಿಗೆ ಇನ್ಯಾರದ್ದೋ ಪ್ರಾಣಕ್ಕೂ ಮಾರಕವಾಗಿ ಬಿಡುತ್ತೆ. ತನ್ನಷ್ಟಕ್ಕೆ ತಾನು ರಸ್ತೆಯಲ್ಲಿ ಹೋಗುತ್ತಿರುವ ವ್ಯಕ್ತಿಗೂ ಗಾಯ ಮಾಡಿಬಿಡುತ್ತೆ ಪಟಾಕಿ. ಪಟಾಕಿ ಹಚ್ಚುವಾಗ ಕಣ್ಣು ಕಳೆದುಕೊಂಡವರು ಲೆಕ್ಕವಿಲ್ಲ. ಈ ಬಾರಿ ಬೆಂಗಳೂರಿನ ಜೆ.ಪಿ.ನಗರದಲ್ಲಿ ಪಟಾಕಿ ಸಿಡಿಸುವಾಗ ರಾಕೆಟ್​ ಸ್ಫೋಟಗೊಂಡು 10 ವರ್ಷದ ಬಾಲಕನೊಬ್ಬನ ಮುಖ ಸಂಪೂರ್ಣ ಸುಟ್ಟು ಹೋಗಿದೆ… ಇದೀಗ ಯಾರೋ ಹಚ್ಚಿದ ರಾಕೆಟ್​ನಿಂದಾಗಿ ಮನೆಯೊಮದು ಧಗಧಗಿಸಿದೆ.

    ದೀಪಾವಳಿ ಹಬ್ಬದ ಹಿನ್ನೆಲೆ ಪಟಾಕಿ ಹಚ್ಚಿ ಸಂಭ್ರಮಿಸುವಾಗ ಮನೆಯೊಂದಕ್ಕೆ ಬೆಂಕಿ ಬಿದ್ದು ಹೊತ್ತಿ ಉರಿದ ಘಟನೆ ಮೂಡಿಗೆರೆ ಪಟ್ಟಣದ ಛತ್ರ ಮೈದಾನದಲ್ಲಿ ನಡೆದಿದೆ. ಬುಧವಾರ ರಾತ್ರಿ ಛತ್ರ ಮೈದಾನದಲ್ಲಿ ಪಟಾಕಿ‌ ಸಿಡಿಸುತ್ತಿದ್ದ ವೇಳೆ ಹಾರಿದ ರಾಕೆಟ್​ವೊಂದು‌ ಮನೆಯೊಂದರ ಮಹಡಿಯಲ್ಲಿ ಒಣ ಹಾಕಿದ್ದ ಬಟ್ಟೆಗೆ ತಗುಲಿದೆ. ಬಟ್ಟೆಗೆ ಹೊತ್ತಿಕೊಂಡ ಬೆಂಕಿ ಇಡೀ‌ ಮನೆಗೆ ಆವರಿಸಿದೆ. ಕೂಡಲೇ ಸ್ಥಳೀಯರು ಬೆಂಕಿ ನಂದಿಸಿದ್ದಾರೆ‌. ಅಗ್ನಿ ಅವಘಡದ ವೇಳೆ ಮನೆಯಲ್ಲಿ ಯಾರೂ ಇರಲಿಲ್ಲ. ಹಾಗಾಗಿ ಅಪಾಯ ತಪ್ಪಿದೆ.

    ಹಾಸನಾಂಬೆ ದೇಗುಲದ ಗರ್ಭಗುಡಿ ಬಾಗಿಲು ಬಂದ್​: ಮುಂದಿನ ವರ್ಷವೇ ದೇವಿಯ ದರ್ಶನ ಸಿಗೋದು

    ಸಾವಿಗೂ ಮುನ್ನ ಬಂಡೇಮಠದ ಶ್ರೀಗಳು ಬರೆದದ್ದು ಒಂದಲ್ಲ, ಎರಡಲ್ಲ ಮೂರು ಡೆತ್​ನೋಟ್​! ಈ ಕುರಿತು ರಾಮನಗರ ಎಸ್​ಪಿ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts