ಇಂದು ಶಿಕ್ಷಕರ ದಿನಾಚರಣೆ

Sarvapalli Radhakrishna
Published on

ಬಸವನಬಾಗೇವಾಡಿ: ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ತಾಲೂಕು ಆಡಳಿತ ಹಾಗೂ ಕ್ಷೇತ್ರ ಕಾರ್ಯಾಲಯದ ಸಂಯುಕ್ತಾಶ್ರಯದಲ್ಲಿ ಸೆ.8 ರಂದು ಬೆಳಗ್ಗೆ 11 ಗಂಟೆಗೆ ಸ್ಥಳೀಯ ವಿರಕ್ತಮಠದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶಿಕ್ಷಕ ಎಚ್.ಬಿ. ಬಾರಿಕಾಯಿ ತಿಳಿಸಿದ್ದಾರೆ.
ಪಟ್ಟಣದ ವಿರಕ್ತಮಠದ ಸಿದ್ಧಲಿಂಗ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕ ಶಿವಾನಂದ ಪಾಟೀಲ ಉದ್ಘಾಟಿಸುವರು, ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಜ್ಯೋತಿ ಬೆಳಗಿಸುವರು. ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಸಂಸದ ರಮೇಶ ಜಿಗಜಿಣಗಿ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ ರಾಠೋಡ, ಅರುಣ ಶಹಾಪುರ, ಸುನೀಲಗೌಡ ಪಾಟೀಲ, ಹಣಮಂತ ನಿರಾಣಿ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಿಂದುರಾಯಗೌಡ ಪಾಟೀಲ, ತಾಪಂ ಅಧ್ಯಕ್ಷ ದೇವೇಂದ್ರ ನಾಯಕ, ತಾಪಂ ಉಪಾಧ್ಯಕ್ಷೆ ಸುಜಾತಾ ಪಾಟೀಲ, ಜಿಪಂ ಸದಸ್ಯರಾದ ಜೈಸಿಂಗ್ ನಾಯಕ, ಶಿವಾನಂದ ದೇಸಾಯಿ, ಶಾಂತಾಬಾಯಿ ನಾಗರಾಳ, ಕಲ್ಲಪ್ಪ ಮಟ್ಟಿ, ಕಮಲಾಬಾಯಿ ಪಾಟೀಲ, ಶ್ರೀದೇವಿ ಐಹೊಳ್ಳಿ, ಬಸವ್ವ ಮಾದರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಬಿ.ಕೆ. ಕಲ್ಲೂರ, ಶಿವನಗೌಡ ಬಿರಾದಾರ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ. ಪ್ರಸನ್‌ಕುಮಾರ, ಪಿ.ಟಿ. ಬೊಂಗಾಳೆ, ಡಿವೈಎಸ್‌ಪಿ ಈ. ಶಾಂತವೀರ, ತಾಪಂ ಇಒ ಭಾರತಿ ಚಲುವಯ್ಯ, ಕ್ಷೇತ್ರ ಸಮನ್ವಯಾಧಿಕಾರಿ ಪಿ.ಯು. ರಾಠೋಡ, ದೈಹಿಕ ಶಿಕ್ಷಣಾಧಿಕಾರಿ ಆರ್.ಆರ್. ಚವಾಣ್, ಸಂಗಮೇಶ ಪೂಜಾರಿ, ಆರ್.ಎಸ್. ತುಂಗಳ, ಬಿ.ಟಿ. ಗೌಡರ, ಅರವಿಂದ ಗಂಗೂರ, ಶಿವಾನಂದ ಮಂಗಾನವರ, ಅಶೋಕ ಹಂಚಲಿ ಮತ್ತಿತರರು ಉಪಸ್ಥಿತರಿರುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net