ಬಸವ ಪುರಸ್ಕಾರ ಮತ್ತು ಬಸವ ಸೇವಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ನಾಳೆ

ಸಾಹಿತಿ ಲೇಖಕರಿಗೆ ರಾಜ್ಯ ಮಟ್ಟದ `ಬಸವ ಪುರಸ್ಕಾರ` ಮತ್ತು `ಬಸವ ಸೇವಾ ರತ್ನ ಪ್ರಶಸ್ತಿ' ಪ್ರದಾನ ಹಾಗೂ ವಚನ ಗಾಯನ ಕಾರ್ಯಕ್ರಮನ್ನು ಅ.೮ ರಂದು ಬೆಳಗ್ಗೆ ೧೦.೩೦ ಗಂಟೆಗೆ ನಗರದ  ಪಬ್ಲಿಕ್ ಗಾರ್ಡನ್‌ದಲ್ಲಿರುವ  ವೀರಶೈವ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ  ಶ್ರೀ ಸುಭಾಶ್ಚಂದ್ರ ಪಾಟೀಲï ಸ್ಮಾರಕ ಜನಕಲ್ಯಾಣ ಟ್ರಸ್ಟ್ ಅಧ್ಯಕ್ಷ ಶರಣಗೌಡ ಪಾಟೀಲ್ ಪಾಳಾ ತಿಳಿಸಿದರು.
IMG-20231006-WA0018
Published on


ವಿಜಯವಾಣಿ ಸುದ್ದಿಜಾಲ ಕಲಬುರಗಿ
ಸಾಹಿತಿ ಲೇಖಕರಿಗೆ ರಾಜ್ಯ ಮಟ್ಟದ `ಬಸವ ಪುರಸ್ಕಾರ` ಮತ್ತು `ಬಸವ ಸೇವಾ ರತ್ನ ಪ್ರಶಸ್ತಿ' ಪ್ರದಾನ ಹಾಗೂ ವಚನ ಗಾಯನ ಕಾರ್ಯಕ್ರಮನ್ನು ಅ.೮ ರಂದು ಬೆಳಗ್ಗೆ ೧೦.೩೦ ಗಂಟೆಗೆ ನಗರದ  ಪಬ್ಲಿಕ್ ಗಾರ್ಡನ್‌ದಲ್ಲಿರುವ  ವೀರಶೈವ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ  ಶ್ರೀ ಸುಭಾಶ್ಚಂದ್ರ ಪಾಟೀಲï ಸ್ಮಾರಕ ಜನಕಲ್ಯಾಣ ಟ್ರಸ್ಟ್ ಅಧ್ಯಕ್ಷ ಶರಣಗೌಡ ಪಾಟೀಲ್ ಪಾಳಾ ತಿಳಿಸಿದರು.
ಜನಕಲ್ಯಾಣ ಟ್ರಸ್ಟ್ ವತಿಯಿಂದ ಬಸವ ಜಯಂತಿ ಆಚರಿಸಿಕೊಂಡು ಬರಲಾಗುತ್ತಿದ್ದು, ಈ ಸಲ ೫ನೇ ವರ್ಷಾಚರಣೆ ಅಂಗವಾಗಿ ಸಾಹಿತಿ, ಲೇಖಕರು ಹಾಗೂ ಸಾಹಿತ್ಯಿಕ ಕೆಲಸ ಮಾಡಿಕೊಂಡು ಬರುತ್ತಿರುವ ಸಾಧಕರನ್ನು ಬಸವ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
೨೦೨೩ನೇ ಸಾಲಿನ ರಾಜ್ಯ ಮಟ್ಟದ ಬಸವ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿತ್ತು. ೪೨೭ ಪುಸ್ತಕಗಳು ಬಂದಿದ್ದವು. ಅದರಲ್ಲಿ ೧೪ ಪುಸ್ತಕಗಳನ್ನು ಆಯ್ಕೆಗೊಂಡಿದ್ದು ಲೇಖಕರಿಗೆ ಬೆಳ್ಳಿ ಪದಕ ನೀಡಿ  ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.
ನಾಲವಾರದ ಪೂಜ್ಯ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯರು, ಸರಡಗಿಯ ಡಾ.ರೇವಣಸಿದ್ದ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಸಮಾರಂಭ ಜರುಗಲಿದೆ. ಮಾಜಿ ಶಾಸಕ ದತ್ತಾತ್ರೇಯ ಪಾಟೀಲï ರೇವೂರ ಉದ್ಘಾಟಿಸುವರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘಟ ಕಾರ್ಯದರ್ಶಿ ಬಸವರಾಜ ದೇಶಮುಖ ಅಧ್ಯP್ಷÀತೆ ವಹಿಸುವರು. ಕೆಕೆಆರ್‌ಡಿಬಿ ಉಪ ಕಾರ್ಯದರ್ಶಿ ಪ್ರೇಮಿಳಾ ಎಂ.ಕೆ. ಪ್ರಶಸ್ತಿ ಪ್ರದಾನ ಮಾಡುವರು. ಡಾ.ನಿಲಾಂಬಿಕಾ ಪೊಲೀಸ್ ಪಾಟೀಲï, ವಿನೋದ ಪಾಟೀಲï ಶ್ರೀನಿವಾಸ ಸರಡಗಿ, ಯಶವಂತರಾಯ ಅಷ್ಠಗಿ ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದು ಪಾಳಾ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ  ಅಂಬಾರಾಯ ಕೋಣೆ, ರಾಜು ಜೈನ್,ಬಸವಂತರಾಯ ಕೊಳ್ಳೂರ ಮೊದಲಾದವರಿದ್ದರು.
== ಬಾಕ್ಸ್==
ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆಯಾದವರು
ಬಸವ ಪುರಸ್ಕಾರಕ್ಕೆ ಆಯ್ಕೆಗೊಂಡ ಕೃತಿಗಳ ಲೇಖಕರರ ವಿವರ ಹೀಗಿದೆ. ಡಾ.ಭೈರಮಂಗಲ ರಾಮೇಗೌಡ, ಪ್ರೊ.ಶೋಭಾದೇವಿ ಚೆಕ್ಕಿ, ಸುಲಕ್ಷಣಾ ಶಿವಪುರ. ನಂದಿನ ಹೆದ್ದುರ್ಗ, ಈರಣ್ಣ ಬೆಂಗಾಲಿ, ಡಾ.ನಾಗರತ್ನ ಬಾವಿಕಟ್ಟಿ, ನಾಗೇಂದ್ರಪ್ಪ ನವಿಲುಪಾಳು, ಸಿದ್ದಲಿಂಗ ದಬ್ಬಾ, ಸಿದ್ದರಾಮ ರಾಜಮಾನೆ, ಚಾಂದಪಾಷಾ ಎನ್.ಎಸ್., ವಿನಯ ನಂದಿಹಾಳ, ಗಿರೀಶಗೌಡ ಇನಾಮದಾರ, ಮಹಾಂತೇಶ ಕುಂಬಾರ ಆಯ್ಕೆಯಾಗಿದ್ದಾರೆ.
ಅಲ್ಲದೆ ವಿಶೇಷವಾಗಿ ಕೊಡ ಮಾಡುವ `ಬಸವ ಸೇವಾ ರತ್ನ ಪ್ರಶಸ್ತಿ'ಗೆ ಡಾ.ಕುಪೇಂದ್ರ ಪಾಟೀಲï, ಸಿದ್ದಪ್ಪ ತಳ್ಳಳ್ಳಿ, ರೇವಣಪ್ಪ ಹೆಗಡೆ ಮತ್ತು ಶಿವಸ್ವಾಮಿ ಜೀನಕೇರಿ ಅವರನ್ನು  ಆಯ್ಕೆ ಮಾಡಲಾಗಿದೆ ಎಂದು ಶರಣಗೌಡ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net