ಬಸವ ಜಯಂತಿ ಆಚರಣೆ: ಏ.18 ರಂದು ವೀರಶೈವ ಕಲ್ಯಾಣ ಮಂಟಪದಲ್ಲಿ ಪೂರ್ವಭಾವಿ ಸಭೆ ; ಶರಣಕುಮಾರ ಮೋದಿ ಹೇಳಿಕೆ

basavanna
Published on

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಪ್ರತಿವರ್ಷದಂತೆ ಈ ವರ್ಷವೂ ಜಗಜ್ಯೋತಿ,ಭಕ್ತಿ ಭಂಡಾರಿ ಬಸವಣ್ಣನವರ 891ನೇ ಜಯಂತ್ಯೋತ್ಸವನ್ನು ಕಲಬುರಗಿ ನಗರದಲ್ಲಿ ವೈಭವ ಮತ್ತು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ. ಬರುವ ಮೇ10ರಂದು ಜರುಗಲಿರುವ ಬಸವ ಜಯಂತಿ ಆಚರಣೆ ಕುರಿತು ಚರ್ಚಿಸಲು ಪೂರ್ವಭಾವಿ ಸಭೆಯನ್ನು ಎಪ್ರಿಲ್ 18 ಗುರುವಾರ ಸಂಜೆ : 5.30 ಕ್ಕೆ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಶರಣಕುಮಾರ ಮೋದಿ ತಿಳಿಸಿದ್ದಾರೆ.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ, ಜಿಲ್ಲಾ ವೀರಶೈವ ಸಮಾಜ, ಜಾಗತಿಕ ಲಿಂಗಾಯತ ವೇದಿಕೆ, ಜಿಲ್ಲಾ ಶ್ರೀ ರೇಣುಕಾಚಾರ್ಯ ಸಮಿತಿ, ವೀರಶೈವ ಲಿಂಗಾಯತ ವೇದಿಕೆ, ವೀರಶೈವ ಲಿಂಗಾಯತ ಸಂಘಟನೆ, ಎಲ್ಲಾ ಬಸವ ಪರ ಸಂಘಟನೆಗಳು ಹಾಗೂ ಮುಖಂಡರುಗಳ ನೇತೃತ್ವದಲ್ಲಿ ಈ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿದೆ. ಅಭಿಮಾನಗಳು , ಹಿತೈಷಿಗಳು ಭಾಗವಹಿಸಿ, ಅಮೂಲ್ಯವಾದ ಸಲಹೆ, ಸೂಚನೆಗಳನ್ನು ನೀಡಿ, "ಬಸವ ಜಯಂತಿ''ಉತ್ಸವವನ್ನು ಯಶಸ್ವಿಗೊಳಿಸಲು ವಿನಂತಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net