ನಾಳೆ ಸಂಸತ್ತಿನಲ್ಲಿ ಬಸವ ಜಯಂತಿ : ಡಾ.ಉಮೇಶ ಜಾಧವ, ಶಿವಕಾಂತ ಮಹಾಜನ್ ಭಾಗಿ

Basavannanavaru - Copy
Published on

ಕಲಬುರಗಿ : ಸಾಂಸ್ಕೃತಿಕ ನಾಯಕರಾಗಿರುವ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಇದೇ ಮೊದಲ ಸಲ ಸಂಸತ್ತಿನಲ್ಲಿ ಏ.೩೦ ರಂದು ಬೆಳಗ್ಗೆ ೧೦ ಗಂಟೆಗೆ ಆಚರಿಸಲಾಗುತ್ತಿದೆ ಎಂದು ಮಾಜಿ ಸಂಸದ ಡಾ.ಉಮೇಶ ಜಾಧವ ಹಾಗೂ ಬಿಜೆಪಿ ಮುಖಂಡ ಶಿವಕಾಂತ ಮಹಾಜನ ತಿಳಿಸಿದ್ದಾರೆ.

ಇದೊಂದು ಐತಿಹಾಸಿಕ ನಿರ್ಣಯವಾಗಿದೆ. ಸಂಸತ್ತಿನ ಮುಂಭಾಗದಲ್ಲಿ ವಿಶ್ವಗುರು ಬಸವಣ್ಣನವರ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಈಗ ರೈಲ್ವೆ ಮತ್ತು ಜಲಶಕ್ತಿ ಸಚಿವರಾದ ವಿ.ಸೋಮಣ್ಣ ಅವರ ಪ್ರಯತ್ನದಿಂದಾಗಿ ಬಸವ ಜಯಂತಿ ಆಚರಿಸಲಾಗುತ್ತಿದ್ದು, ಸ್ಪೀಕರ್ ಓಂಪ್ರಕಾಶ ಬಿರ್ಲಾ ಹಾಗೂ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ,ಎಚ್.ಡಿ.ಕುಮಾರಸ್ವಾಮಿ,ಸಿ.ಆರ್.ಪಾಟೀಲ್, ಅಶ್ವಿನ್‌ವೈಷ್ಣವ್, ಶೋಭಾ ಕರಂದ್ಲಾಜೆ ಸೇರಿ ಹಲವು ಸಚಿವರು ಮಾಜಿ ಸಂಸದ ಡಾ.ಉಮೇಶ ಜಾಧವ,ಬಿಜೆಪಿ ಮುಖಂಡ ಶಿವಕಾಂತ ಮಹಾಜನ ಮೊದಲಾದವರು ಭಾಗಿಯಾಗಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net