ಗೌಡರ ಹುಂಡಿ ಗ್ರಾಮದಲ್ಲಿ ಅದ್ದೂರಿ ಬಸವ ಜಯಂತಿ

ಗೌಡರ ಹುಂಡಿ ಗ್ರಾಮದಲ್ಲಿ ಅದ್ದೂರಿ ಬಸವ ಜಯಂತಿ
Published on

ನಂಜನಗೂಡು: ತಾಲೂಕಿನ ಗೌಡರಹುಂಡಿ ಗ್ರಾಮದಲ್ಲಿ ಬಸವ ಜಯಂತಿ ಹಾಗೂ ಶ್ರೀ ಸದ್ಗುರು ಮಹಾದೇವ ತಾತಾ ಅವರ ಪಲ್ಲಕ್ಕಿ ಉತ್ಸವ ಶನಿವಾರ ಅದ್ದೂರಿಯಾಗಿ ನಡೆಯಿತು.

ಬಸವಣ್ಣ ಮತ್ತು ಸದ್ಗುರು ಮಹಾದೇವ ತಾತಾ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಪಲ್ಲಕ್ಕಿ ಉತ್ಸವವು ಸಾಗುವ ರಸ್ತೆ ಯುದ್ಧಕ್ಕೂ ಹಸಿರು ತೋರಣಗಳು ಹಾಗೂ ವಿದ್ಯುತ್ ದೀಪ ಅಲಂಕಾರಗಳಿಂದ ಸಿಂಗರಿಸಲಾಗಿತ್ತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆಯಲ್ಲಿ ಮಂಗಳವಾದ್ಯ, ವೀರಗಾಸೆ ಕುಣಿತ, ಕಂಸಾಳೆ, ತಮಟೆ ಛತ್ರಿ ಚಾಮರಗಳು ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಭಾಗವಹಿಸಿದ್ದವು.

ಉತ್ಸವದ ಹಿನ್ನೆಲೆಯಲ್ಲಿ ಸಾವಿರಾರು ಜನರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ವೀರಶೈವ ಲಿಂಗಾಯಿತ ಮಹಾಸಭಾ ಜಿಲ್ಲಾಧ್ಯಕ್ಷ ಪ್ರದೀಪ್, ತಾಲೂಕು ಅಧ್ಯಕ್ಷ ಎಸ್.ಎಂ. ಕೆಂಪಣ್ಣ, ಗ್ರಾಮದ ಯಜಮಾನರು, ಮುಖಂಡರು ಹಾಗೂ ವೀರಶೈವ ಲಿಂಗಾಯಿತ ಯುವಕರು ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net