ಬಸಪ್ಪನಿಗೆ ಮುದ್ರಾಧಾರಣೆ, ಅಂಗಧಾರಣೆ ದೀಕ್ಷೆ

10KMD-1
ದೊಡ್ಡರಸಿನಕೆರೆ ಗ್ರಾಮದ ಶ್ರೀ ಸಣ್ಣಕ್ಕಿರಾಯಸ್ವಾಮಿ ದೇವರ ಬಸಪ್ಪನಿಗೆ ಮುದ್ರಾಧಾರಣೆ ಮತ್ತು ಅಂಗಧಾರಣೆ ದೀಕ್ಷೆ ಕಾರ್ಯಕ್ರಮ ಜರುಗಿತು.
Published on

ಕೆ.ಎಂ.ದೊಡ್ಡಿ: ಸಮೀಪದ ದೊಡ್ಡರಸಿನಕೆರೆ ಗ್ರಾಮದ ಶ್ರೀ ಸಣ್ಣಕ್ಕಿರಾಯಸ್ವಾಮಿ ದೇವರ ಬಸಪ್ಪನಿಗೆ ಮುದ್ರಾಧಾರಣೆ ಮತ್ತು ಅಂಗಧಾರಣೆ ದೀಕ್ಷೆ ಕಾರ್ಯಕ್ರಮ ಜರುಗಿತು.

ಮುದ್ರಾಧಾರಣೆ ಹಿನ್ನೆಲೆಯಲ್ಲಿ ಕಳೆದ ಶನಿವಾರ (ಜೂನ್ 7)ನದಿಯ ದಡದಿಂದ ದೊಡ್ಡರಸಿನಕೆರೆ ಶ್ರೀ ಕಾಲಭೈರವೇಶ್ವರಸ್ವಾಮಿ ಬಸಪ್ಪ, ಶ್ರೀ ಸಣ್ಣಕ್ಕಿರಾಯಸ್ವಾಮಿ ಬಸವ ಗೋ ಸಮೇತ, ಹೊಂಬಾಳೆ ಮಾಡಿಕೊಂಡು ಗಂಗೆಯನ್ನು ತರುವುದು. ನಂತರ ಗೋಧೂಳಿ ಲಗ್ನದಲ್ಲಿ ಗೋಪೂಜೆ, ಗಣಪತಿ ಪೂಜೆ, ಗಣಹೋಮ, ಪಂಚಬ್ರಹ್ಮ ಹೋಮ, ಇತ್ಯಾದಿ ಹೋಮಗಳು ಪೂರ್ಣಾಹುತಿ ನೆರವೇರಿತು.

ಭಾನುವಾರ ಬ್ರಾಹ್ಮಿ ಮುಹೂರ್ತದಲ್ಲಿ ದೈವ ಸಂಭೂತ ಪ್ರಧಾನಶಕ್ತಿ ದೇವತಾ ಕ್ಷೇತ್ರಾಧಿಪತಿ ಶ್ರೀ ಸಣ್ಣಕ್ಕಿರಾಯಸ್ವಾಮಿ ಬಸಪ್ಪನವರಿಗೆ ಅಭಿಷೇಕ, ರುದ್ರಹೋಮ, ಶಾಂತಿ ಹೋಮ, ಜಯಾಧಿ ಹೋಮ, ಪ್ರಾಯಶ್ಚಿತ ಹೋಮದ ನಂತರ ಬೆಳಗ್ಗೆ ಮಿಥುನ ಲಗ್ನದಲ್ಲಿ ಮುದ್ರಾಧಾರಣೆ ಮತ್ತು ಅಂಗಧಾರಣೆ ದೀಕ್ಷೆಯನ್ನು ಗುರುವಿನಪುರ ಮಠದ ಶ್ರೀ ಜಗದೀಶ ಶಿವಾಚಾರ್ಯ ಸ್ವಾಮೀಜಿ ನೆರವೇರಿಸಿದರು.

ಶ್ರೀ ಸಣ್ಣಕ್ಕಿರಾಯಸ್ವಾಮಿಗೆ ಅಭಿಷೇಕ ಮತ್ತು ಹೋಮದ ನಂತರ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಂಜೆ ದೊಡ್ಡರಸಿಕೆರೆ ಗ್ರಾಮದಲ್ಲಿ ಶ್ರೀ ಸಣ್ಣಕ್ಕಿರಾಯ ಬಸಪ್ಪ, ಶ್ರೀ ಕಾಲಭೈರವೇಶ್ವರ ಬಸಪ್ಪನ ಮೆರವಣಿಗೆಗಳು ಜರುಗಿದವು.

ದೊಡ್ಡರಸಿನಕೆರೆ, ಮುಟ್ಟನಹಳ್ಳಿ ದೇವರಹಳ್ಳಿ, ಕುರಿಕೆಂಪನದೊಡ್ಡಿ, ಗೌಡಯ್ಯನದೊಡ್ಡಿ, ಕರಡಕೆರೆ, ಕೆ.ಎಂ.ದೊಡ್ಡಿ. ಚಿಕ್ಕಮರಿಗೌಡನಗರ, ಛತ್ರದಹೊಸಹಳ್ಳಿ, ಹುಣ್ಣನದೊಡ್ಡಿ, ಚಿಕ್ಕರಸಿನಕೆರೆ, ಗುರುದೇವರಹಳ್ಳಿ, ಮೆಳ್ಳಹಳ್ಳಿ, ಕಾಡನಪುರದದೊಡ್ಡಿ, ಅಣ್ಣೂರು, ಕಡಿಲುವಾಗಿಲು, ಲಕ್ಕೇಗೌಡನದೊಡ್ಡಿ, ಸಬ್ಬನಹಳ್ಳಿ, ಮಾಲಗಾರನಹಳ್ಳಿ, ಕೊಂಡಾಪುರ, ಕೊಡಂಬಳ್ಳಿ, ಹುಚ್ಚಯ್ಯನದೊಡ್ಡಿ ಅಂಚಿಪುರ, ಮಠದದೊಡ್ಡಿ, ಮಂಚೇಗೌಡನದೊಡ್ಡಿ ಸೋಮಪುರ, ನೀಲಕಂಠನಹಳ್ಳಿ, ಜವನಗನಹಳ್ಳಿ, ಮಳವಳ್ಳಿ, ಮಂಡ್ಯ ಜಿಲ್ಲೆ ವಿವಿಧೆಡೆ, ಮೈಸೂರು, ಚಾಮರಾಜನಗರ, ರಾಮನಗರ ಹಾಗೂ ಬೆಂಗಳೂರು ಜಿಲ್ಲೆಗಳಿಂದ ಭಕ್ತರು ಆಗಮಿಸಿ ಮುದ್ರಾಧಾರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಶ್ರೀ ಸಣ್ಣಕ್ಕಿರಾಯ ಬಸವ ಸೇವಾ ಸಮಿತಿಯ ಪದಾಧಿಕಾರಿಗಳು, ದೇವಾಲಯದ ಪೂಜಾರಿಗಳು ಮತ್ತು ಯಾಜಮಾನರು, ಗ್ರಾಮಸ್ಥರು ಸೇರಿದಂತೆ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net