ಬರಡು ಹಸುಗಳ ಚಿಕಿತ್ಸಾ ಶಿಬಿರ ಇಂದು

Cow-1
Published on

ಹಂದಿಗುಂದ: ಸಮೀಪದ ಸುಲ್ತಾನಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂ(ನಿ), ರಾಯಬಾಗ ಪಶುಪಾಲನ ಮತ್ತು ಪಶು ವೈದ್ಯಕಿಯ ಸೇವಾ ಇಲಾಖೆ, ಪಶು ಚಿಕಿತ್ಸಾಲಯ ಹಂದಿಗುಂದ ಇವರ ಸಂಯುಕ್ತಾಶ್ರಯದಲ್ಲಿ ಕರುಗಳ ಪ್ರದರ್ಶನ, ಹಸುಗಳ ಹಾಲು ಕರೆಯುವ ಸ್ಪರ್ಧೆ ಹಾಗೂ ಬರಡು ಹಸುಗಳ ಚಿಕಿತ್ಸೆ ಶಿಬಿರವನ್ನು ೆ.28ರಂದು ಬೆಳಗ್ಗೆ 9 ಗಂಟೆಗೆ ಸುಲ್ತಾನಪುರ ಕೆಎಂಎ್​ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕಲಬುರಗಿಯ ಹಾಲು ಉತ್ಪಾದಕರ ಮಹಾಮಂಡಳ ತರಬೇತಿ ಕೇಂದ್ರದ ನಿವೃತ್ತ ಜಂಟಿ ನಿರ್ದೇಶಕ ಡಾ.ವಿ.ಕೆ.ಜೋಶಿ, ಪಶುಪಾಲನ ಇಲಾಖೆ ಮತ್ತು ಪಶು ವೈದ್ಯಾಧಿಕಾರಿ ಹಾಗೂ ವಿವಿಧ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದೆ ಎಂದು ಸುಲ್ತಾನಪುರ ಹಾಲು ಉತ್ಪಾದಕರ ಸಹಕಾರಿ ಸಂ (ನಿ) ಅಧ್ಯ ಗುರುಪಾದ ಚೌಗುಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net