ಬಾರ್ಕೂರು ದೇವಸ್ಥಾನ ಬ್ರಹ್ಮಕಲಶ

padma
Published on

ವಿಜಯವಾಣಿ ಸುದ್ದಿಜಾಲ ಬ್ರಹ್ಮಾವರ

ಕರಾವಳಿ ಪದ್ಮಶಾಲಿಗರ ಮೂಲ ಕ್ಷೇತ್ರ ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಫೆ.14ರಿಂದ 20ರವರೆಗೆ ಅಷ್ಟಬಂಧ- ಬ್ರಹ್ಮಕಲಶೋತ್ಸವ, ಹಾಲು ಹಬ್ಬ, ವಾರ್ಷಿಕ ಪೂಜೆ, ಗೆಂಡಸೇವೆ ನಡೆಯಲಿದೆ.

14ರಂದು ಬೆಳಗ್ಗೆ 8ಕ್ಕೆ ಸಾಮೂಹಿಕ ಪ್ರಾರ್ಥನೆ, ಸಂಜೆ ಹಸಿರುವಾಣಿ ಸಮರ್ಪಣೆ, ಶ್ರೀ ಭದ್ರಕಾಳಿ ದುರ್ಗಾಪರಮೇಶ್ವರಿ ಪ್ರತಿಷ್ಠಾಂಗ ಬಿಂಬಶುದ್ಧಿ, ಕಲಶ ಸ್ಥಾಪನೆ, 15ರಂದು ಬೆಳಗ್ಗೆ ಶ್ರೀದೇವಿ ಬಿಂಬ ಪ್ರತಿಷ್ಠಾಪನೆ, ಕಲಶಾಭಿಷೇಕ, ಮಹಾಪೂಜೆ, 9 ಗಂಟೆಗೆ ನರ್ಸಿ ಮತ್ತು ಶ್ರೀ ಕೃಷ್ಣ ಶೆಟ್ಟಿಗಾರ ಚೇರ್ಕಾಡಿ ಸ್ಮರಣಾರ್ಥ ಕವಿತಾ ಜೆ.ಎಸ್., ಡಾ.ಜಯರಾಮ ಶೆಟ್ಟಿಗಾರ ಮತ್ತು ಮಕ್ಕಳು ಸಂತೆಕಟ್ಟೆ ಕೊಡುಗೆಯ ಸ್ವಾಮಿ ಕೃಷ್ಣಾನಂದಗಿರಿ ಮಿನಿ ಸಭಾಭವನ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ ಅವರಿಂದ ಉದ್ಘಾಟನೆ, ಶ್ರೀ ವೀರಭದ್ರ/ ಭದ್ರಕಾಳಿ/ ದುರ್ಗಾಪರಮೇಶ್ವರಿ ಭಜನಾ ಕೃತಿ ಬಿಡುಗಡೆ ಮತ್ತು ಸಂಕೀರ್ತನೆ ನಡೆಯಲಿದೆ.

16ರಂದು ಬೆಳಗ್ಗೆ 8ಕ್ಕೆ ನಾಗದೇವರ ಬಿಂಬ ಸ್ಥಾಪನೆ, ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದಂಗಳವರಿಂದ ಭದ್ರತಾ ಕೊಠಡಿ ಉದ್ಘಾಟನೆ ಹಾಗೂ ಆಶೀರ್ವಚನ, ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾ ಅಧ್ಯಕ್ಷ ರವಿ ಶೆಟ್ಟಿಗಾರ್ ಅವರಿಂದ ಅತಿಥಿ ಗೃಹ ಉದ್ಘಾಟನೆ, ಬಳಿಕ ಸಭಾ ಕಾರ್ಯಕ್ರಮದಲ್ಲಿ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ ಅಂಬಲಪಾಡಿ ಧರ್ಮದರ್ಶಿ ಡಾ.ನಿ.ಬಿ.ವಿಜಯ ಬಲ್ಲಾಳ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಭಾಗವಹಿಸಲಿದ್ದಾರೆ. ಸಂಜೆ ಭಕ್ತಿ ರಸಮಂಜರಿ, ಶಿವಧೂತ ಗುಳಿಗ ನಾಟಕ ಜರುಗಲಿದೆ.

17ರಂದು 11ಕ್ಕೆ ಸಭಾ ಕಾರ್ಯಕ್ರಮದಲ್ಲಿ ಬಾರ್ಕೂರು ಮಹಾ ಸಂಸ್ಥಾನದ ಡಾ.ವಿಶ್ವ ಸಂತೋಷ ಭಾರತೀ ಶ್ರೀಪಾದರಿಂದ ಆಶೀರ್ವಚನ, 18ರಂದು ಬ್ರಹ್ಮಕಲಶಾಭಿಷೇಕ, ಮಹಾಪೂಜೆ, 11ಕ್ಕೆ ಸಭಾ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗಡೆ ಅವರಿಂದ ಆಶೀರ್ವಚನ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕಿರಣ್ ಕುಮಾರ್ ಕೊಡ್ಗಿ, ನಾಡೋಜ ಡಾ.ಜಿ.ಶಂಕರ್, ಉದ್ಯಮಿ ಆನಂದ್ ಸಿ.ಕುಂದರ್, ಬಾರಕೂರು ಗ್ರಾಪಂ ಅಧ್ಯಕ್ಷ ಬಿ.ಶಾಂತಾರಾಮ ಶೆಟ್ಟಿ, ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮೊಕ್ತೇಸರ ಧನಂಜಯ ಶೆಟ್ಟಿ ಭಾಗವಹಿಸಲಿದ್ದಾರೆ. ರಾತ್ರಿ 10ಕ್ಕೆ ಗೆಂಡ ಸೇವೆ ನಡೆಯಲಿದೆ.

19ರಂದು ಮೂಡು ಗಣಪತಿ ಸೇವೆ, ನಾಗದೇವರಿಗೆ ಹಾಲಿಟ್ಟು ಸೇವೆ, ಢಕ್ಕೆಬಲಿ, ತುಲಾಭಾರ, ಮಹಾಪೂಜೆ, ಮಧ್ಯಾಹ್ನ 1 ಗಂಟೆಗೆ ವಾರ್ಷಿಕ ಮಹಾಸಭೆ, ಸಂಜೆ ಕುಮಾರ ಮಂದಿರದಲ್ಲಿ ವಿಶೇಷ ಪೂಜೆ, 20ರಂದು ಮಹಾ ಸಂಪ್ರೋಕ್ಷಣೆ ಹಾಗೂ ಶುದ್ಧ ಕಲಶ, ದೇವರ ಭಂಡಾರ ಹಿಂದಿರುಗಿಸುವುದು. ಪ್ರತಿ ದಿನ ಸಂಜೆ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮ ನಡೆಯಲಿದೆ ಎಂದು ಅಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಶ್ರೀನಿವಾಸ ಶೆಟ್ಟಿಗಾರ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎಚ್.ಎ.ಗೋಪಾಲ್, ದೇವಸ್ಥಾನ ಆಡಳಿತ ಮೊಕ್ತೇಸರ ಡಾ.ಜಯರಾಮ ಶೆಟ್ಟಿಗಾರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net