

ಬ್ರಹ್ಮಾವರ: ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ ಮೈಸೂರು ನಡೆಸಿದ ಭರತನಾಟ್ಯ ಜೂನಿಯರ್‌ಗ್ರೇಡ್ ಪರೀಕ್ಷೆಯಲ್ಲಿ ಮೇಘನಾ ಪ್ರಭು ಕೊಕ್ಕರ್ಣೆ ಶೇ.93.75 ಅಂಕದೊಂದಿಗೆ ಉತ್ತೀರ್ಣರಾಗಿದ್ದಾರೆ.
ಅವರು ಉಡುಪಿ ರಾಧಾಕೃಷ್ಣ ನೃತ್ಯನಿಕೇತನದ ಗುರು ನೃತ್ಯ ವಿದುಷಿ ವೀಣಾಮುರಳೀಧರ ಸಾಮಗ ಅವರ ಶಿಷ್ಯೆ. ಕೊಕ್ಕರ್ಣೆ ದೀಪಕ್ ಪ್ರಭು ಮತ್ತು ಗಾಯತ್ರಿ ಡಿ.ಪ್ರಭು ದಂಪತಿ ಪುತ್ರಿ. ಬ್ರಹ್ಮಾವರ ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್‌ನಲ್ಲಿ 8ನೇ ತರಗತಿಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.