

ಸಾತನೂರು ಸಮೀಪ ಸಿನಿಮೀಯ ರೀತಿ ಅಟ್ಟಹಾಸ
ಕನಕಪುರ: ಸಾತನೂರು ಸಮೀಪ ಡಾಬಾವೊಂದರಲ್ಲಿ ಸಿನಿಮೀಯ ರೀತಿ ಗ್ರಾಪಂ ಮಾಜಿ ಅಧ್ಯಕ್ಷನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈಯ್ಯಲಾಗಿದೆ.
ಸಾತನೂರು ಹೋಬಳಿ ಅಚಲು ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಹೊಂಗಾಣಿದೊಡ್ಡಿ ನಿವಾಸಿ ಕಾಂಗ್ರೆಸ್ ಮುಖಂಡ ನಂಜೇಶ್(44) ಮೃತ.
ಹೊಂಗಾಣಿದೊಡ್ಡಿಯಲ್ಲಿ ಕೆಲ ತಿಂಗಳಿಂದ ಅಶಾಂತಿಯ ವಾತಾವರಣವಿದ್ದು, ಈ ನಡುವೆ 4 ದಿನಗಳ ಹಿಂದೆ ಗ್ರಾಮದ ಸೈಟ್ ವಿಚಾರದಲ್ಲಿ ಗಲಾಟೆ ನಡೆದಿತ್ತು. ಈ ಸಂಬಂಧ ಸಾತನೂರು ಪೊಲೀಸರು ಎರಡು ಗುಂಪುಗಳ ನಡುವೆ ದೂರು&ಪ್ರತಿದೂರು ದಾಖಲಿಸಿಕೊಂಡಿದ್ದರು. ಒಂದು ದೂರಿನಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ನಂಜೇಶ್ ವಿರುದ್ಧವೂ ಪ್ರಕರಣ ದಾಖಲಾಗಿತ್ತು. ಇದರ ಬೆನ್ನಲ್ಲೇ ಶನಿವಾರ ರಾತ್ರಿ ದಾಳಿ ನಡೆದಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಆತನನ್ನು ಖಾಸಗಿ ಆಸ್ಪತ್ರೆಗೆ ಸ್ನೇಹಿತರು ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಲಿಸದೆ ಶನಿವಾರ ರಾತ್ರಿ ಮೃತಪಟ್ಟಿದ್ದಾರೆ.
ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶವ ಪರೀೆಯ ನಂತರ ಸ್ವಗ್ರಾಮ ಹೊಂಗಾಣಿದೊಡ್ಡಿಯಲ್ಲಿ ಅಂತ್ಯಕ್ರಿಯೆ ನೆರವೇರಿತು. ಈ ವೇಳೆ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿ ಹಲವು ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.ಮಾಜಿ ಸಂಸದ ಡಿ.ಕೆ.ಸುರೇಶ್, ಎಂ.ಎಲ್.ಸಿ ರವಿ, ಮುಖಂಡರಾದ ಡಿ.ಎಂ.ವಿಶ್ವನಾಥ್, ಎಂ.ಡಿ.ವಿಜಯದೇವ್ ಸೇರಿ ಹಲವರು ಅಂತಿಮ ದರ್ಶನ ಪಡೆದರು.
ಶವ ಸಂಸ್ಕಾರದ ವೇಳೆ ಹಲ್ಲೆ
ಹೊಂಗಾಣಿದೊಡ್ಡಿಯಲ್ಲಿ ಭಾನುವಾರ ಮಧ್ಯಾಹ್ನ ನಂಜೇಶ್ ಅವರ ಅಂತ್ಯಕ್ರಿಯೆ ವಿಧಿ ವಿಧಾನಗಳ ಸಮಯದಲ್ಲಿ ಅಂತಿಮ ದರ್ಶನ ಪಡೆಯಲು ಬಂದ ಅಚ್ಚಲು ಪಂಚಾಯಿತಿಯ ಬಿಜೆಪಿ ಗ್ರಾಪಂ ಸದಸ್ಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆದಿದೆ. ಬೊಮ್ಮನಹಳ್ಳಿ ಕುಮಾರಸ್ವಾಮಿ ಹಲ್ಲೆಗೊಳಗಾದವರು. ಸ್ಥಳದಲ್ಲಿದ್ದ ತಾಪಂ ಮಾಜಿ ಅಧ್ಯಕ್ಷ ದೊಡ್ಡಆಲಹಳ್ಳಿ ಕೃಷ್ಣಪ್ಪ ಸೇರಿ ಮತ್ತಿತರರು ಕುಮಾರಸ್ವಾಮಿ ಅವರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ. ದಾಳಿಯಿಂದ ಗಂಭೀರ ಗಾಯಗೊಂಡ ಕುಮಾರಸ್ವಾಮಿ ಅವರನ್ನು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ನಿಮ್ಹಾನ್ಸ್ಗೆ ರವಾನಿಸಲಾಗಿದೆ. ಪರಿಸ್ಥಿತಿ ಉದ್ವಿಗ್ನ ಗೊಳ್ಳುವ ಹಂತದಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ಸಮಾಧಾನಗೊಳಿಸಿದರು.