ಮಹಾಡ್​ ಸತ್ಯಾಗ್ರಹ ಇಂದಿಗೂ ಪ್ರಸ್ತುತ: ಸಾಹಿತಿ ಬರಗೂರು ಅಭಿಮತ

Baraguru
Published on

ಬೆಂಗಳೂರು: ಗಾಂಧೀಜಿ ಕೈಗೊಂಡಿದ್ದ ಉಪ್ಪಿನ ಸತ್ಯಾಗ್ರಹ ಈಗ ಇತಿಹಾಸ. ಆದರೆ, ಅಂಬೇಡ್ಕರ್​ ಕೈಗೊಂಡಿದ್ದ ಮಹಾಡ್​ ಸತ್ಯಾಗ್ರಹ ಇಂದಿಗೂ ಪ್ರಸ್ತುತವಾಗಿದೆ ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.

ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ದಲಿತ ಸಂರ್ಷ ಸಮಿತಿ (ಅಂಬೇಡ್ಕರ್​ ವಾದ) ಆಯೋಜಿಸಿದ್ದ "ಮಹಾಡ್​ ಸತ್ಯಾಗ್ರಹ: ಇತಿಹಾಸ ಮತ್ತು ವರ್ತಮಾನದ ಭಾರತ' ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಸಂವಿಧಾನ ಶಿಲ್ಪಿ ಡಾ. ಬಿ.ಆರ್​. ಅಂಬೇಡ್ಕರ್​ ಅವರು ಚೌಡರ್​ ಕೆರೆಗೆ ಇಳಿದು "ಮಹಾಡ್​ ಸತ್ಯಾಗ್ರಹ'ದ ಮೂಲಕ ಜಡ ಸಂಪ್ರದಾಯ, ವರ್ಣಾಶ್ರಮದ ವಿರುದ್ಧ ಸಮರ ಸಾರಿದರು. ಉಪ್ಪಿನ ಸತ್ಯಾಗ್ರಹದ ಮೂಲಕ ವಸಾಹತುಶಾಹಿ ವಿರುದ್ಧ ಗಾಂಧೀಜಿ ಆಗ ಸಮರ ಸಾರಿದ್ದರು. ಸ್ವಾತಂತ್ರ$್ಯದ ನಂತರವೂ ಜಡ ಸಂಪ್ರದಾಯವಾದಿಗಳು ತಾರತಮ್ಯ ಮುಂದುವರಿಸಿರುವ ಹಿನ್ನೆಲೆ "ಮಹಾಡ್​ ಸತ್ಯಾಗ್ರಹ' ಪ್ರಸ್ತುತವಾಗಿದೆ. ಮಹಿಳೆಯರಿಗೆ ಶಬರಿಮಲೆ ಪ್ರವೇಶಕ್ಕೆ ಇನ್ನೂ ಅನುಮತಿ ಸಿಕ್ಕಿಲ್ಲ. ವಸಾಹುತಶಾಹಿ ವ್ಯವಸ್ಥೆ ಕೊನೆಗೊಂಡಿದ್ದರೂ, ವರ್ಣ ವ್ಯವಸ್ಥೆ ಅಳಿದಿಲ್ಲ ಎಂದು ಕಿಡಿಕಾರಿದರು.

ಪ್ರಗತಿಪರ ಚಿಂತಕ ಬಿ.ಶ್ರೀಪಾದ ಭಟ್​ ಮಾತನಾಡಿ, ಅಂಬೇಡ್ಕರ್​ ಮಾಡಿದ "ಮಹಾಡ್​ ಸತ್ಯಾಗ್ರಹ' ಹಾಗೂ "ಕಾಲಾರಾಮ್​ ದೇವಸ್ಥಾನ'ದ ಪ್ರವೇಶ ಚಳವಳಿಗಳನ್ನು ಟನೆ ಎಂದು ಭಾವಿಸಬಾರದು. ಇವು ಅವರು ಸಮಸಮಾಜ ನಿರ್ಮಾಣದ ಹೋರಾಟಕ್ಕಾಗಿ ಹಾಕಿಕೊಟ್ಟವೇದಿಕೆಗಳು ಎಂದು ಅರಿಯಬೇಕು ಎಂದು ವಿಶ್ಲೇಷಿಸಿದರು.

ಸಾಮಾಜಿಕ ಹೋರಾಟಗಾರ್ತಿ ದು.ಸರಸ್ವತಿ, ಜಾನಪದ ಅಕಾಡೆಮಿ ನಿಯೋಜಿತ ಅಧ್ಯ ಗೊಲ್ಲಹಳ್ಳಿ ಶಿವಪ್ರಸಾದ್​, ದಲಿತ ಸಂರ್ಷ ಸಮಿತಿ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್​, ವಿ.ಎಲ್​.ನರಸಿಂಹಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net