ಶಿಕ್ಷಣದ ಸಬಲೀಕರಣಕ್ಕಾಗಿ ಕೆಲಸ ಪ್ರಶಂಸೆಗೆ ಪಾತ್ರ : ಕೆ.ಎಂ.ಸಿದ್ದೀಕ್ ಪುತ್ತೂರು ಮೆಚ್ಚುಗೆ

07
Published on

ಬಂಟ್ವಾಳ: ಶೈಕ್ಷಣಿಕವಾಗಿ 4 ದಶಕಗಳಿಂದ ಕರಾವಳಿಯ ಸಮುದಾಯದ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಿದಂತಹ ಹಾಗೂ ಶಿಕ್ಷಣದ ಸಬಲೀಕರಣಕ್ಕಾಗಿ ಕೆಲಸ ಮಾಡಿದ ಪ್ರಶಂಸೆಗೆ ಜಮೀಯ್ಯತಲ್ ಫಲಾಹ್ ಸಂಸ್ಥೆ ಪಾತ್ರವಾಗಿದೆ ಎಂದು ಜಮೀಯ್ಯತುಲ್ ಫಲಾಹ್ ಕೇಂದ್ರೀಯ ಟಕ ಕೋಶಾಧಿಕಾರಿ ಕೆ.ಎಂ.ಸಿದ್ದೀಕ್ ಪುತ್ತೂರು ಹೇಳಿದರು.

ಬಿ.ಸಿ.ರೋಡ್ ಲಯನ್ಸ್ ಭವನದಲ್ಲಿ ಬಂಟ್ವಾಳ ಜಮೀಯ್ಯತುಲ್ ಫಲಾಹ್ ವತಿಯಿಂದ ಶುಕ್ರವಾರ ಮೆಲುಕು 2022-25 ಹಾಗೂ ಮಹಾಸಭೆಯ ವೀಕ್ಷಕರಾಗಿ ಆಗಮಿಸಿ ಚೈತನ್ಯ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

ಟಕದ ಅಧ್ಯಕ್ಷ ರಶೀದ್ ವಿಟ್ಲ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ಕೆ.ಕೆ.ಶಾಹುಲ್ ಹಮೀದ್ ವಾರ್ಷಿಕ ವರದಿ ಮಂಡಿಸಿದರು. ಟಕದ ಕೋಶಾಧಿಕಾರಿ ಎಂ.ಎಚ್.ಇಕ್ಬಾಲ್ ಲೆಕ್ಕಪತ್ರ ಮಂಡಿಸಿದರು. ವೀಕ್ಷಕರಾದ ಮಂಗಳೂರು ತಾಲೂಕು ಟಕ ಅಧ್ಯಕ್ಷ ಮಹಮ್ಮದ್ ಬಪ್ಪಳಿಗೆ, ಜಿಲ್ಲಾ ಕಾರ್ಯದರ್ಶಿ ಶೇಖ್ ಅಬ್ದುಲ್ ಗಫೂರ್ ವೇದಿಕೆಯಲ್ಲಿದ್ದರು. ನಿರ್ಗಮನ ಅಧ್ಯಕ್ಷ ರಶೀದ್ ವಿಟ್ಲ ಸಹಕರಿಸಿದ ಸದಸ್ಯರನ್ನು ಸ್ಮರಣಿಕೆ ನೀಡಿ ಗೌರವಿಸಿದರು. ಉಪಾಧ್ಯಕ್ಷ ಲತೀಫ್ ನೇರಳಕಟ್ಟೆ ಸ್ವಾಗತಿಸಿದರು. ಅಬ್ದುಲ್ ರರಝಾಕ್ ಅನಂತಾಡಿ ನಿರೂಪಿಸಿದರು.

ನೂತನ ಪದಾಧಿಕಾರಿಗಳು

2025-27ನೇ ಸಾಲಿಗೆ ನೂತನ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ಬಿ.ಎಂ.ಅಬ್ಬಾಸ್ ಅಲಿ ಬೋಳಂತೂರು, ಕಾರ್ಯದರ್ಶಿಯಾಗಿ ಹಕೀಮ್ ಕಲಾಯಿ, ಕೋಶಾಧಿಕಾರಿಯಾಗಿ ರಶೀದ್ ವಿಟ್ಲ, ಉಪಾಧ್ಯಕ್ಷರಾಗಿ ಆಸಿಫ್ ಇಕ್ಬಾಲ್, ಬಿ.ಎಂ.ತುಂಬೆ, ಜತೆ ಕಾರ್ಯದರ್ಶಿಯಾಗಿ ಕೆ.ಎಸ್.ಮಹಮ್ಮದ್ ಗಡಿಯಾರ, ಸಂಘಟನಾ ಕಾರ್ಯದರ್ಶಿ ಶೇಖ್ ರಹ್ಮತುಲ್ಲಾ, ಪತ್ರಿಕಾ ಕಾರ್ಯದರ್ಶಿಯಾಗಿ ಆಶಿಕ್ ಕುಕ್ಕಾಜೆ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೆ.ಕೆ.ಶಾಹುಲ್ ಹಮೀದ್, ಎಂ.ಎಚ್. ಇಕ್ಬಾಲ್, ಲತೀಫ್ ನೇರಳಕಟ್ಟೆ, ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ಅಬೂಬಕರ್ ವಿಟ್ಲ, ಎಫ್.ಎಂ.ಬಶೀರ್, ಅಬ್ದುಲ್ ರಜಾಕ್ ಅನಂತಾಡಿ, ರಫೀಕ್ ತೌಫೀಕ್, ಮಹಮ್ಮದ್ ನಾರಂಕೋಡಿ, ಪಿ.ಮಹಮ್ಮದ್ ಪಾಣೆಮಂಗಳೂರು, ಹಂಝ ಬಸ್ತಿಕೋಡಿ, ವಿ.ಎಚ್.ಅಶ್ರಫ್ ವಿಟ್ಲ, ಮಹಮ್ಮದ್ ಸಾಗರ್ ಆಯ್ಕೆಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net