

ತಿ.ನರಸೀಪುರ: ತಾಲೂಕಿನ ಬನ್ನೂರು ಪುರಸಭೆ ಆಡಳಿತ ಜೆಡಿಎಸ್-ಬಿಜೆಪಿ ಮೈತ್ರಿಕೂಟದ ವಶವಾಗಿದ್ದು, ಅಧ್ಯಕ್ಷರಾಗಿ ಕೃಷ್ಣೇಗೌಡ ಹಾಗೂ ಉಪಾಧ್ಯಕ್ಷೆಯಾಗಿ ನಾಗರತ್ನಾ ಪ್ರಭಾಕರ ಅವಿರೋಧ ಆಯ್ಕೆಯಾದರು.
ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಿಗದಿಯಾಗಿತ್ತು. ಹಿಂದುಳಿದ ವರ್ಗ ‘ಬಿ’ಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ 5ನೇ ವಾರ್ಡ್‌ನ ಜೆಡಿಎಸ್ ಸದಸ್ಯ ಕೃಷ್ಣೇಗೌಡ ಹಾಗೂ ಹಿಂದುಳಿದ ವರ್ಗ ‘ಎ’ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ 11ನೇ ವಾರ್ಡ್‌ನ ಬಿಜೆಪಿ ಸದಸ್ಯೆ ನಾಗರತ್ನಾ ಪ್ರಭಾಕರ ಇಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಗೊಂಡರು. ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್ ಕಾರ್ಯನಿರ್ವಹಿಸಿದರು. ಆಯ್ಕೆ ಘೋಷಣೆ ಮಾಡುತ್ತಿದ್ದಂತೆ ಎರಡೂ ಪಕ್ಷಗಳ ಕಾರ್ಯಕರ್ತರು, ಬೆಂಬಲಿಗರು ಸಂಭ್ರಮಾಚರಿಸಿದರು.
ಒಟ್ಟು 23 ಸದಸ್ಯರಲ್ಲಿ 22 ಸದಸ್ಯರು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಬಿ.ಎಸ್.ಶ್ರುತಿ ಗೈರು ಹಾಜರಾಗಿದ್ದರು. ಕಳೆದ ಬಾರಿ ಪ.ಪಂಗಡಕ್ಕೆ ಅಧ್ಯಕ್ಷ ಸ್ಥಾನ ಮೀಸಲಾಗಿದ್ದರಿಂದ ಜೆಡಿಎಸ್ ಪ್ರಾಬಲ್ಯವಿರುವ ಪುರಸಭೆಯಲ್ಲಿ ಕಾಂಗ್ರೆಸ್ ಸದಸ್ಯೆ ಭಾಗ್ಯಶ್ರೀ ಕೃಷ್ಣ ಅಧ್ಯಕ್ಷೆಯಾಗಿದ್ದರು.
ಚುನಾವಣಾ ಪ್ರಕ್ರಿಯೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪಾಲ್ಗೊಂಡಿದ್ದರು. ಫಲಿತಾಂಶದ ಬಳಿಕ ಎಸ್‌ಆರ್‌ಪಿ ರಸ್ತೆಯಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದರು. ನಂತರ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು. ಮಾಜಿ ಶಾಸಕ ಎಂ.ಅಶ್ವಿನ್ ಕುಮಾರ್ ಜತೆಗಿದ್ದರು.
ಪುರಸಭೆ ಸದಸ್ಯರಾದ ಭಾಗ್ಯಶ್ರೀ ಕೃಷ್ಣ, ಎಸ್.ಭಾಗ್ಯಾ, ಎಂ.ಕೆ.ಮಹೇಶ, ಬಿ.ಕೆ.ಆನಂದ, ಎಂ.ಆರ್.ಸೌಮ್ಯಾರಾಣಿ, ನಂಜುಂಡಸ್ವಾಮಿ, ಬಿ.ಆರ್.ಶ್ರೀನಿವಾಸ್, ಅನಂತಮೂರ್ತಿ, ಶೋಭಾ ಸತೀಶ್, ದಿವ್ಯಾ ಪೈ.ಚಂದ್ರು, ಫಿರ್ದೋಸ್, ಫೀರ್ ಖಾನ್, ಬಿ.ಎಸ್.ಲೋಕಾಂಬಿಕಾ, ಶಿವಮೂರ್ತಿ, ಪುಷ್ಪಾವತಿ, ಮೂರ್ತಿ, ಬಿ.ಕೆ.ಕಾಂತರಾಜು, ಶಿವಣ್ಣ, ಚಲುವರಾಜು, ಸಿ.ಆರ್.ವಿಜಯಕುಮಾರ್, ಸಿ.ಸಿ.ಸುರೇಶ್, ಮುಖ್ಯಾಧಿಕಾರಿ ಹೇಮಂತ್ ರಾಜ್, ಜಿಪಂ ಮಾಜಿ ಸದಸ್ಯ ಎಸ್.ವಿ.ಜಯಪಾಲ ಭರಣಿ, ಬಿಜೆಪಿ ಜಿಲ್ಲಾಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಜೆಡಿಎಸ್ ಕ್ಷೇತ್ರಾಧ್ಯಕ್ಷ ಸಿ.ಬಿ.ಹುಂಡಿ ಚಿನ್ನಸ್ವಾಮಿ, ಕಾರ್ಯಾಧ್ಯಕ್ಷ ಸಿದ್ದಪ್ಪ, ತಾಪಂ ಮಾಜಿ ಅಧ್ಯಕ್ಷ ಕುಮಾರಸ್ವಾಮಿ, ಟಿಎಪಿಸಿಎಂಎಸ್ ನಿರ್ದೇಶಕ ಟಿ.ವಾಸುದೇವ್, ವೈ.ಎಸ್.ರಾಮಸ್ವಾಮಿ, ನಾಗೇಂದ್ರ, ಎನ್.ಎಂ.ರಾಮಚಂದ್ರ, ಅತ್ತಹಳ್ಳಿ ರವಿ, ಬಸವನಹಳ್ಳಿ ವೆಂಕಟೇಶ್, ರಾಜು ಇದ್ದರು.