

ಬನ್ನೂರು: ಎಲ್ಲ ಹೈನುಗಾರರ ಪರಿಶ್ರಮದ ಫಲವಾಗಿ ಬನ್ನೂರಿನ ಹಾಲು ಉತ್ಪಾದಕ ಸಹಕಾರ ಸಂಘ ಉತ್ತಮ ಲಾಭ ಕಾಣುತ್ತಿದೆ ಎಂದು ಬನ್ನೂರು ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಬಿ.ಎನ್.ಕೃಷ್ಣೇಗೌಡ ತಿಳಿಸಿದರು.
ಪಟ್ಟಣದ ಎನ್.ಆರ್.ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಹಾಲು ಉತ್ಪಾದಕ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿದರು. ರೈತರು ಸರ್ಕಾರದ ಸೌಲಭ್ಯವನ್ನು ಬಳಸಿಕೊಂಡು ಉತ್ತಮ ರೀತಿಯಲ್ಲಿ ಹೈನುಗಾರಿಕೆ ಮಾಡುವ ಮೂಲಕ ಬನ್ನೂರು ಡೇರಿಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಬೇಕು ಎಂದು ತಿಳಿಸಿದರು.
ಕಾರ್ಯದರ್ಶಿ ರಾಘು ಮಾತನಾಡಿ, ಈ ಬಾರಿ ಸಂಘಕ್ಕೆ 12,29,763 ರೂ. ಲಾಭ ಬಂದಿದೆ. ಎಲ್ಲ ರೈತರಿಗೆ ಬೋನಸ್ ಹಣವನ್ನು ಶನಿವಾರ ಅವರ ಖಾತೆಗೆ ಜಮಾ ಮಾಡಲಾಗುವುದು ಎಂದು ತಿಳಿಸಿದರು.
ಸನ್ಮಾನ: ಅಧಿಕ ಹಾಲು ಪೂರೈಸಿದ ಹಾಲು ಉತ್ಪಾದಕರಾದ ವಿ.ವಾಸು, ಮಂಜುನಾಥ, ಸೋಮಶೇಖರ್, ಬಿ.ಎನ್.ಕಿಶೋರ, ಮೋಹನ್‌ಕುಮಾರ್, ಬಿ.ರಮೇಶ್, ಮಧು, ನಾಗೇಂದ್ರ, ಕಿರಣ, ಮಹೇಶ್ ಅವರನ್ನು ಸನ್ಮಾನಿಸಲಾಯಿತು. ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಬಿ.ಎನ್.ಕೃಷ್ಣೇಗೌಡ, ಬಿ.ಸಿ.ಉಮೇಶ್‌ಕುಮಾರ್, ಎಂ.ಚಂದ್ರು, ವೆಂಕಟೇಶ್, ಮಹೇಶ್, ನಿಂಗಪ್ಪ, ಶ್ರೀಧರ, ಬಿ.ಎಸ್.ರಾಜೀವ, ರುದ್ರ, ಬಿ.ಎಸ್.ಶಿವಕುಮಾರ, ಬಿ.ವಿ.ಉಮೇಶ್, ಬಿ.ಕೆ.ಶೋಭಾ, ಸುಶೀಲಾ ಇತರರು ಉಪಸ್ಥಿತರಿದ್ದರು.