ಹನುಮ ಜಯಂತಿ, ಬನ್ನಿಗೋಳ ವರಗೈ ಸ್ವಾಮಿಗೆ ಸರ್ವಾಭರಣ ಸಿಂಗಾರ

Bannigola Varagai Anjaneya Fair
ಬನ್ನಿಗೋಳ ಗ್ರಾಮದಲ್ಲಿ ವರಗೈ ಆಂಜನೇಯಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
Published on

ಹಗರಿಬೊಮ್ಮನಹಳ್ಳಿ: ತಾಲೂಕಿನ ಬನ್ನಿಗೋಳ ಗ್ರಾಮದಲ್ಲಿ ಶ್ರೀವರಗೈ ಆಂಜನೇಯ ಸ್ವಾಮಿ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ಸಂಜೆ ವಿಜೃಂಭಣೆಯಿಂದ ಜರುಗಿತು.

ಪ್ರತಿ ವರ್ಷದ ಹನುಮ ಜಯಂತಿ ಮತ್ತು ಹಂಪಿ ಹುಣ್ಣಿಮೆ ನಿಮಿತ್ತ ವರಗೈ ಆಂಜನೇಯ ಸ್ವಾಮಿ ರಥೋತ್ಸವ ನೆರವೇರಲಿದೆ. ದೇಗುಲದಲ್ಲಿ ಆಂಜನೇಯ ಸ್ವಾಮಿಗೆ ಅಭಿಷೇಕ, ವಿಶೇಷ ಪೂಜೆ ನೆರವೇರಿಸಿ ಸರ್ವಾಭರಣ ಅಲಂಕಾರ ಮಾಡಲಾಗಿತ್ತು.

ಬನ್ನಿಗೋಳ ಗ್ರಾಮಕ್ಕೆ ಸುತ್ತಲಿನ ಏಣಿಗಿ, ಬಸರುಕೋಡು, ಶೀಗೇನಹಳ್ಳಿ, ತಂಬ್ರಹಳ್ಳಿ, ಬ್ಯಾಸಿಗಿದೇರಿ ನಂದಿಪುರ, ಗದ್ದಿಕೇರಿ ಗ್ರಾಮಸ್ಥರು ಆಗಮಿಸಿ ತೇರಿಗೆ ಬಾಳೆಹಣ್ಣು ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು. ದೇವಸ್ಥಾನ ಸಮಿತಿಯಿಂದ ವಿಶೇಷ ದೇಣಿಗೆ ನೀಡಿದ ದಾನಿಗಳಿಗೆ ಹನುಮ ಶ್ರೀರಕ್ಷೆ ನೀಡಲಾಯಿತು.

ನಿವೃತ್ತ ಶಿಕ್ಷಕ ಶ್ಯಾಂ ಸುಂದರ್, ಮೂಲಿ ರವಿಪ್ರಸಾದ್, ಹ್ಯಾಟಿ ಆನಂದರೆಡ್ಡಿ, ಮೈನಳ್ಳಿ ಕೊಟ್ರೇಶಪ್ಪ, ಶೀಗೇನಹಳ್ಳಿ ಬಸವರೆಡ್ಡಿ, ಮಡಿವಾಳರ ಹನುಮಂತಪ್ಪ, ಪೂಜಾರ ಉಮಾಪತಿ, ಗುರುಸ್ವಾಮಿ ಹಿರೇಮಠ, ದಾಸಪ್ಪನ ಬಳಗ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net