ಹೊನ್ನಾವರದಲ್ಲಿ ಬ್ಯಾನರ್‌ ರಾಜಕೀಯ ಶುರು

20hnr1
Published on

ಹೊನ್ನಾವರ: ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕುಮಟಾ-ಹೊನ್ನಾವರ ಕ್ಷೇತ್ರದಲ್ಲಿ ಬ್ಯಾನರ್‌ ರಾಜಕೀಯ ಶುರುವಾಗಿದೆ. ತಾಲೂಕಿನ ಅರೇಅಂಗಡಿಯ ಸರ್ಕಲ್ ಬಳಿ ಮಾಜಿ ಶಾಸಕಿ ಶಾರದಾ ಶೆಟ್ಟಿ ಬೆಂಬಲಿಗರು ಅಳವಡಿಸಿದ ಬ್ಯಾನರ್‌ನ್ನು ಭಾನುವಾರ ರಾತ್ರಿ ಕಿಡಿಗೇಡಿಗಳು ಕತ್ತರಿಸಿ ಹಾನಿ ಮಾಡಿದ್ದು, ಇದಕ್ಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೇಸ್ ಬೆಂಬಲಿಸಿ, ಮುಂದಿನ ದಿನದಲ್ಲಿ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಈಗಾಗಲೇ ಘೋಷಣೆಯಾದ ಗ್ಯಾರಂಟಿ ಯೋಜನೆ ಜಾರಿಗೊಳಿಸುವ ಪ್ರಚಾರದ ಬ್ಯಾನರ್ ಇತ್ತಿಚೀಗೆ ಕಾಂಗ್ರೆಸ್ ಕಾರ್ಯಕರ್ತರು ಅಳವಡಿಸಿದ್ದರು. ಭಾನುವಾರ ರಾತ್ರಿ ಕಿಡಿಗೇಡಿಗಳು ಈ ಬ್ಯಾನರ್ ಹರಿದಿದ್ದು, ಉದ್ದೇಶಪೂರ್ವಕವಾಗಿ ಕೇಂದ್ರ ಮತ್ತು ರಾಜ್ಯ ಕಾಂಗ್ರೆಸ್ ನಾಯಕರು ಮತ್ತು ಮಾಜಿ ಶಾಸಕಿ ಶಾರದಾ ಶೆಟ್ಟಿ ಭಾವಚಿತ್ರದ ಬಳಿ ಸಗಣಿ ಎರಚಿ ವಿರೋಪಗೊಳಿಸಿದ್ದಾರೆ. ಬ್ಯಾನರ್ ಕತ್ತರಿಸಿ ಶಾಂತಿ ಕದಡುವ ನೀಚ ಕೃತ್ಯ ಎಸಗಲಾಗಿದೆ. ಅವರ ವಿರುದ್ದ ದೂರು ನೀಡಲಾಗುವುದು ಎಂದು ಸ್ಥಳಿಯ ಕಾಂಗ್ರೆಸ್ ಕಾರ್ಯಕರ್ತ ವಿನೋದ ನಾಯ್ಕ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net