

ಅಂಕೋಲಾ : ತಾಲೂಕಿನ ಹುಲಿದೇವರವಾಡ ಅರಣ್ಯ ಪ್ರದೇಶದಲ್ಲಿ ಅಂದರ್‌ಬಾಹರ್ ಆಡುತ್ತಿದ್ದ 8 ಜನರ ಮೇಲೆ ಭಾನುವಾರ ಪ್ರಕರಣ ದಾಖಲಾಗಿದ್ದು, ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಇನ್ನೂ ನಾಲ್ವರು ತಲೆಮರೆಸಿ ಕೊಂಡಿದ್ದಾರೆ.
ಇಲ್ಲಿಯ ಹುಲಿದೇವರವಾಡದ ಗಣಪತಿ ಮಂಗು ಗೌಡ (29), ಶಾಂತಾ ಬಂಟ್ ಗೌಡ (42), ಮಾದೇವ ಸೋಮು ಗೌಡ (54), ಅಜ್ಜಿಕಟ್ಟಾದ ದೀಪಕ ಚಂದ್ರಕಾAತ ನಾಯ್ಕ (46) ಇವರನ್ನು ಪೊಲೀಸರು ಬಂಧಿಸಿದ್ದು, ಇಸೂಪ್ ದಾವುದ್ ಶೇಖ್, ಸಂತೋಷ ಮಂಗು ಗೌಡ, ಸುರೇಶ ಮಂಗು ಗೌಡ, ಪಾಂಡು ಗೋವಿಂದ ಗೌಡ ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ತಲೆಮರೆಸಿಕೊಂಡಿದ್ದಾರೆ.
ಪಿಐ ಜಾನ್ಸ್ ಡಿಸೋಜಾ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ಮಹಾಂತೇಶ ವಾಲ್ಮಕಿ ತಂಡ ದಾಳಿ ನಡೆಸಿ ವಶಕ್ಕೆ ಪಡೆದವರಿಂದ 5 ಸಾವಿರಕ್ಕೂ ಹೆಚ್ಚು ನಗದು ಮತ್ತು ಇಸ್ಪೀಟ್ ಎಲೆ ಸೇರಿದಂತೆ ಇತರೇ ಪರಿಕರಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.