ಬೆಂಗಳೂರು ವಿಶ್ವವಿದ್ಯಾಲಯ ಬಂದ್: 2ನೇ ಸುತ್ತಿನ ಪಿಎಚ್‌ಡಿ ಕೌನ್ಸೆಲಿಂಗ್ ಮುಂದೂಡಿಕೆ

phd student protest
Published on

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಪಿಎಚ್.ಡಿ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಏಕಾಏಕಿ ನಿರ್ಧಾರ ತೆಗೆದುಕೊಳ್ಳುತ್ತಿರುವುದನ್ನು ವಿರೋಧಿಸಿ ಬೆಂ.ವಿವಿ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ ಸೋಮವಾರ ನಡೆಸಿದ ಬಂದ್ ಯಶಸ್ವಿಯಾಗಿದೆ.

ನೂರಾರು ವಿದ್ಯಾರ್ಥಿಗಳು ಜ್ಞಾನಭಾರತಿಯಲ್ಲಿರುವ ವಿವಿಯ ಆಡಳಿತ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಮೇ.17ರಿಂದ ನಡೆಯಬೇಕಾಗಿದ್ದ ಎರಡನೇ ಸುತ್ತಿನ ಕೌನ್ಸೆಲಿಂಗ್ ಅನ್ನು ವಿವಿಯು ಮುಂದೂಡಿಕೆ ಮಾಡಲು ನಿರ್ಧರಿಸಿದೆ. ಅಲ್ಲದೆ, ಪಿಎಚ್.ಡಿ ಪ್ರವೇಶ ಪ್ರಕ್ರಿಯೆ ಕುರಿತು ಶೀಘ್ರದಲ್ಲೇ ಎಲ್ಲ ಡೀನ್‌ಗಳ ಸಭೆ ಕರೆದು ಚರ್ಚೆ ನಡೆಸಲು ನಿರ್ಧರಿಸಿದೆ. ಆನಂತರ ಈ ವಿಚಾರವನ್ನು ವಿದ್ಯಾವಿಷಯಕ ಪರಿಷತ್ತಿನಲ್ಲೂ ಚರ್ಚಿಸಿ ಪಿಎಚ್.ಡಿ ಪ್ರಕ್ರಿಯೆ ಆರಂಭಿಸಿಲು ಆಲೋಚಿಸಿದೆ. ಇದನ್ನೂ ಓದಿರಿ ಸೀಟ್ ಬ್ಲಾಕಿಂಗ್ ದಂಧೆ: ಕಾಲೇಜುಗಳನ್ನ ಕಪ್ಪುಪಟ್ಟಿಗೆ ಸೇರಿಸಲು ಚಿಂತನೆ

ಪ್ರತಿಭಟನಾ ಸ್ಥಳಕ್ಕೆ ಬೆಂ.ವಿವಿ ಕುಲಪತಿ ಡಾ.ಕೆ.ಆರ್.ವೇಣುಗೋಪಾಲ್ ಆಗಮಿಸಿ ವಿದ್ಯಾರ್ಥಿಗಳ ಸಮಸ್ಯೆಗೆ ಬಗೆಹರಿಸಲು ಶೀಘ್ರವೇ ಸಭೆ ಕರೆಯವುದಾಗಿ ಮತ್ತು ಎರಡನೇ ಸುತ್ತಿನ ಪಿಎಚ್.ಡಿ ಕೌನ್ಸೆಲಿಂಗ್ ಅನ್ನು ಮುಂದೂಡುವುದಾಗಿ ಭರವಸೆ ನೀಡಿದ ಮೇಲೆ ಪ್ರತಿಭಟನೆಯನ್ನು ಕೈ ಬಿಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net