

ಬೆಂಗಳೂರು: ವಿಜ್ಞಾನ ಮತ್ತು ತಂತ್ರಜ್ಞಾನದ ವಿಷನ್ ಗ್ರೂಪ್ ವತಿಯಿಂದ ಮೂಳೆ ಪುನರ‌್ರಚನೆ ವಿಷಯ ಕೈಗೊಂಡಿರುವ ಎರಡು ವರ್ಷಗಳ ಸಂಶೋಧನಾ ಯೋಜನೆಗೆ ಸಂಶೋಧನಾ ಸಹಾಯಕ ಹುದ್ದೆಗೆ ಬೆಂಗಳೂರು ವಿಶ್ವವಿದ್ಯಾಲಯವು ಅರ್ಜಿ ಆಹ್ವಾನಿಸಿದೆ.
ಜೀವ ವಿಜ್ಞಾನ ವಿಷಯದಲ್ಲಿ ಎಂ.ಎಸ್ಸಿಯಲ್ಲಿ ಶೇ.60 ಅಂಕ ಪಡೆದಿರುವವರು ಅರ್ಜಿ ಸಲ್ಲಿಸಬಹುದು. ಅನಿಮಲ್ ಸೆಲ್ ಕಲ್ಚರ್‌ನಲ್ಲಿ ಸಂಶೋಧನಾ ಅನುಭವ ಹೊಂದಿರುವ ನೆಟ್/ಸ್ಲೆಟ್ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.
ಅರ್ಜಿಯನ್ನು ದಾಖಲೆಗಳೊಂದಿಗೆ ಡಾ. ಎಂ. ಶ್ರೀಪ್ರಿಯಾ, ಪ್ರಾಧ್ಯಾಪಕಿ, ಪ್ರಧಾನ ಸಂಶೋಧಕಿ, ಸೂಕ್ಷ್ಮ ಜೀವಾಣು ಶಾಸ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನ ಭಾರತಿ ಕ್ಯಾಂಪಸ್- ಬೆಂಗಳೂರು- 560 056 ಈ ವಿಳಾಸಕ್ಕೆ ಸೆ.23ರೊಳಗೆ ಸಲ್ಲಿಸುವಂತೆ ತಿಳಿಸಿದೆ. ಮಾಸಿಕ 25 ಸಾವಿರ ರೂ,ಗಳ ಗೌರವಧನ ನೀಡಲಾಗುತ್ತದೆ.