

ಬೆಂಗಳೂರು ಬೆಂಗಳೂರು ವಿಶ್ವವಿದ್ಯಾಲಯವು ಸೆಪ್ಟಂಬರ್‌ನಲ್ಲಿ ನಡೆಸಲಿರುವ 58ನೇ ವಾರ್ಷಿಕ ಘಟಿಕೋತ್ಸವಕ್ಕೆ ಅತಿಥಿಯಾಗಿ ಆಹ್ವಾನಿಸಲು 9 ಗಣ್ಯರ ಹೆಸರುಗಳನ್ನು ಪಟ್ಟಿ ಮಾಡಿದೆ.
ಇಸ್ರೋ ಅಧ್ಯಕ್ಷ ಎಸ್.ಪಿ. ಸೋಮನಾಥ್, ವಿಪ್ರೋ ಸಂಸ್ಥಾಪಕ ಡಾ. ಅಜೀಂ ಪ್ರೇಮ್ ಜಿ, ಇನ್ಫೋಸಿಸ್ ೌಂಡೇಷನ್ ಮುಖ್ಯಸ್ಥೆ ಡಾ. ಸುಧಾ ಮೂರ್ತಿ, ಕೇಂದ್ರ ಶಿಕ್ಷಣ ಸಚಿವ ಡಾ. ಧಮೇಂದ್ರ ಪ್ರಧಾನ್, ಇನ್ಫೋಸಿಸ್ ಸಹ ಸಂಸ್ಥಾಪಕರಾದ ಡಾ. ನಂದನ್ ನಿಲೇಕಣಿ, ಕ್ರಿಸ್ ಗೋಪಾಲಕೃಷ್ಣ, ಐಐಎಸ್ಸಿ ನ್ಯಾನೋ ಸೈನ್ಸ್ ವಿಭಾಗದ ನಿರ್ದೇಶಕ ನವಕಾಂತ ಭಟ್, ಯುಜಿಸಿ ಅಧ್ಯಕ್ಷ ಜಗದೀಶ್ ಮತ್ತು ಯುವ ಉದ್ಯಮಿ ನಿಖಿಲ್ ಕಾಮತ್ ಅವರನ್ನು ಗುರುತಿಸಿದೆ. ಇವರಲ್ಲಿ ಒಬ್ಬರನ್ನು ಘಟಿಕೋತ್ಸವದ ಮುಖ್ಯ ಅತಿಥಿಯಾಗಿ ಆಹ್ವಾನಿಸಲು ಕಳೆದ ಸಿಂಡಿಕೇಟ್ ಸಭೆಯಲ್ಲಿ ತೀರ್ಮಾನಿಸಿದೆ.
ನಿಖಿಲ್ ಕಾಮತ್ ಅವರು ವಯಸ್ಸಿನಲ್ಲಿ ಚಿಕ್ಕವರಾಗಿದ್ದು, ಯುವ ಉದ್ಯಮಿಯಾಗಿ ಖ್ಯಾತಿ ಪಡೆದಿರುವುದರಿಂದ ವಿದ್ಯಾರ್ಥಿಗಳಿಗೆ ಯುವಕರಿಂದಲೇ ಪ್ರೇರಣೆ ಸಿಗಲಿ ಎಂದು ಇವರನ್ನೇ ಅಂತಿಮ ಮಾಡಲು ವಿವಿ ಆಲೋಚಿಸಿದೆ ಎಂದು ವಿವಿ ಮೂಲಗಳು ತಿಳಿಸಿವೆ.
ಗೌಡಾ ಸಮಿತಿ: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಾಧಕರನ್ನು ಗುರುತಿಸಿ ಗೌರವ ಡಾಕ್ಟರೇಟ್(ಗೌಡಾ) ನೀಡುವುದಕ್ಕಾಗಿ ರಾಜ್ಯ ಸರ್ಕಾರ ನೇಮಿಸುವ ಸಮಿತಿಗೆ ವಿವಿ ವತಿಯಿಂದ ಕೊಪ್ಪಳ ವಿವಿ ಕುಲಪತಿ ಡಾ. ಬಿ.ಕೆ. ರವಿ ಅವರ ಹೆಸರನ್ನು ಶಿಾರಸು ಮಾಡಿದೆ. ಇವರು ಒಳಗೊಂಡ ಸಮಿತಿಯು ಗೌಡಾಕ್ಕಾಗಿ ಬರುವ ಅರ್ಜಿಗಳನ್ನು ಪರಿಶೀಲಿಸಿ ಮೂರು ಹೆಸರನ್ನು ರಾಜ್ಯಪಾಲರ ಅನುಮೋದನೆಗೆ ಕಳುಹಿಸುತ್ತದೆ. ಆನಂತರ ಸಮಿತಿಯು ಆಯ್ಕೆ ಮಾಡಿದ ವ್ಯಕ್ತಿಗೆ ಬೆಂವಿವಿ ಗೌಡಾ ನೀಡಲಿದೆ.