ಬೆಂಗಳೂರು ವಿಶ್ವವಿದ್ಯಾಲಯ: ಎಲ್‌ಎಲ್‌ಬಿ ಆನರ್ಸ್‌ಗೆ ಅರ್ಜಿ ಆಹ್ವಾನ

Bangalore University (1)
Published on

ಬೆಂಗಳೂರು ಬೆಂಗಳೂರು ವಿಶ್ವವಿದ್ಯಾಲಯವು 2024-25ನೇ ಶೈಕ್ಷಣಿಕ ಸಾಲಿನ 5 ವರ್ಷಗಳ ಬಿಎ, ಎಲ್‌ಎಲ್‌ಬಿ (ಆನರ್ಸ್) ಕೋರ್ಸ್ ಪದವಿಯ ಮೊದಲ ಸೆಮಿಸ್ಟರ್ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಿದೆ.

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಮೇ 20 ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ದ್ವಿತೀಯ ಪಿಯುಸಿಯಲ್ಲಿ ಕನಿಷ್ಠ ಶೇ.45 ಅಂಕ ಪಡೆದಿರಬೇಕು. ಸಾಮಾನ್ಯ ಅಭ್ಯರ್ಥಿಗಳ ವಯಸ್ಸು 22 ಮೀರಿರಬಾರದು.ಆಸಕ್ತ ಅಭ್ಯರ್ಥಿಗಳು ಬೆಂಗಳೂರು ವಿವಿ ವೆಬ್‌ಸೈಟ್ https://bangaloreuniversity.karnataka.gov.in

ಅಥವಾ www.ulcbangalore.com ನಲ್ಲಿ ಲಭ್ಯವಿರುವ ಅರ್ಜಿ ಭರ್ತಿ ಮಾಡಬೇಕು. ಇದರ ಒಂದು ಪ್ರತಿಯನ್ನು ವಿಶ್ವವಿದ್ಯಾಲಯದ ಕಾನೂನು ಕಾಲೇಜು ಪ್ರಾಂಶುಪಾಲರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ 080 22961172/1174 ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net