

ರಾಮನಗರ
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಚುನಾವಣೆಯ ಅಂತಿಮ ಕಣದಲ್ಲಿ ಬಿಜೆಪಿಯ ಡಾ.ಸಿ.ಎನ್.ಮಂಜುನಾಥ್ ಮತ್ತು ಕಾಂಗ್ರೆಸ್‌ನ ಡಿ.ಕೆ.ಸುರೇಶ್ ಸೇರಿದಂತೆ ಒಟ್ಟು 15 ಮಂದಿ ಉಳಿದಿದ್ದಾರೆ.
ನಾಮಪತ್ರ ವಾಪಾಸಾತಿಗೆ ಕೊನೆಯ ದಿನವಾದ ಸೋಮವಾರ ಒಟ್ಟು 12 ಮಂದಿ ನಾಮಪತ್ರ ವಾಪಾಸ್ ಪಡೆಯುವುದರೊಂದಿಗೆ ಕೂತುಹಲಕ್ಕೆ ತೆರೆಬಿದ್ದು, ಅಂತಿಮ ಕಣದಲ್ಲಿ 15 ಮಂದಿ ಉಳಿಯುವಂತೆ ಆಗಿದೆ.
ಬಿಜೆಪಿಯ ಡಾ.ಸಿ.ಎನ್.ಮಂಜುನಾಥ್, ಕಾಂಗ್ರೆಸ್‌ನ ಡಿ.ಕೆ.ಸುರೇಶ್, ಉತ್ತಮ ಪ್ರಜಾಕೀಯ ಪಕ್ಷದ ಅಭಿಷೇಕ್ ಕೆ, ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷದ ಕುಮಾರ್ ಎಲ್, ಪಿರಮಿಡ್ ಪಾರ್ಟಿ ಆಫ ಇಂಡಿಯಾದ ಎನ್.ಕೃಷ್ಣಪ್ಪ , ವಿದುತಲೈ ಚಿರುತ್ತಗಲ ಕಟಚಿ ಪಕ್ಷದ ಎಚ್.ವಿ. ಚಂದ್ರಶೇಖರ್, ಕರ್ನಾಟಕ ರಾಷ್ಟ್ರೀಯ ಸಮಿತಿಯ ಮಹಮದ್ ಮುಸದಿಕ್ ಪಾಶ, ಯಂಗ್ ಸ್ಟಾರ್ ಎಂಪವರ‌್ಮೆಂಟ್ ಪಕ್ಷದ ಮಹಮದ್ ದಸ್ತಗಿರಿ, ಬಹುಜನ ಭಾರತ ಪಕ್ಷದ ಮಂಜುನಾಥ್ ಸಿ.ಎನ್, ಕಂಟ್ರಿ ಸಿಟಿಜನ್ ಪಾರ್ಟಿಯ ವಶಿಷ್ಟ ಜೆ, ಕರುನಾಡ ಪಾರ್ಟಿಯ ಸುರೇಶ್ ಎಸ್, ಸೋಯಲಿಷ್ಟ್ ಯೂನಿಟಿ ಸೆಂಟರ್ ಆಪ್ ಇಂಡಿಯಾ(ಕಮ್ಯೂನಿಸ್ಟ್)ದ ಹೇಮಾವತಿ ಕೆ, ಪಕ್ಷೇತರ ಅಭ್ಯರ್ಥಿಗಳಾದ ನರಸಿಂಹ ಮೂರ್ತಿ ಜೆ.ಪಿ , ಜೆಟಿ ಪ್ರಕಾಶ್ ಹಾಗೂ ಸುರೇಶ್ ಎಂ.ಎನ್. ಅಂತಿಮ ಕಣದ ಅಭ್ಯರ್ಥಿಗಳಾಗಿದ್ದಾರೆ.
ಎಲ್.ವಿ. ವೆಂಕಟೇಶ್, ಎನ್. ವಸಂತ ರಾವ್ ಜಗತಾಪ್, ಮಹೇಶ್ ಎಸ್., ಡಿ.ಎಂ. ಮಾದೇಗೌಡ, ಮಂಜುನಾಥ ಕೆ, ಮಂಜುನಾಥ ಎನ್., ಡಾ.ಚಿನ್ನಪ್ಪ ವೈ ಚಿಕ್ಕಹಾಗಡೆ, ಮಂಜುನಾಥ ಸಿ, ಮನಮೋಹನ್ ರಾಜ್ ಕೆ.ಎನ್.,ರಾಜೇಂದ್ರ ಟಿ, ದೇವರಾಜ್ ಎಂ.ಸಿ., ಶ್ರೀನಿವಾಸ ಮೂರ್ತಿ ಎಚ್.ಕೆ. ನಾಮಪತ್ರ ವಾಪಾಸ್‌ಪಡೆದವರು. ಇದರೊಂದಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ 45 ನಾಮಪತ್ರ ಸ್ವೀಕೃತವಾಗಿದ್ದು 25 ನಾಮಪತ್ರಗಳು ಅಂಗಿಕೃತಗೊಂಡಿರುತ್ತದೆ, 7 ನಾಮಪತ್ರಗಳು ತಿರಸ್ಕೃತಗೊಂಡಿವೆ ಹಾಗೂ 13 ನಾಮಪತ್ರಗಳು ವಾಪಸ್ಸು ಪಡೆದಿದ್ದಾರೆ.