ಮೆಟ್ರೋ ಹಳಿಗೆ ಬಿದ್ದ ಮರದ ಕೊಂಬೆ; ಟ್ರಿನಿಟಿ-ಎಂ.ಜಿ.ರಸ್ತೆ ನಿಲ್ದಾಣಗಳ ನಡುವೆ ಘಟನೆ

Metro
Published on

ಬೆಂಗಳೂರು: ಭಾನುವಾರ ಸಂಜೆ ಸುರಿದ ಭಾರೀ ಮಳೆಗೆ ನಮ್ಮ ಮೆಟ್ರೋ ಟ್ರಿನಿಟಿ ನಿಲ್ದಾಣದ ಬಳಿ ಮರವೊಂದು ನೆಲಕ್ಕುರುಳಿದ್ದು, ಕೊಂಬೆಗಳು ಹಳಿ ಮೇಲೆ ಬಿದ್ದಿದೆ. ಇದರಿಂದ ಕೆಲಕಾಲ ನೇರಳೆ ಮಾರ್ಗದಲ್ಲಿ ಸಂಚಾರ ವ್ಯತ್ಯಯವಾಯಿತು.

ಟ್ರಿನಿಟಿ-ಮಹಾತ್ಮ ಗಾಂಧಿ ನಿಲ್ದಾಣಗಳ ಹಳಿಯ ಮೇಲೆ ಸಂಜೆ 7.25ರ ಹೊತ್ತಿಗೆ ಮರದ ಕೊಂಬೆಗಳು ಮುರಿದು ಬಿದ್ದಿದ್ದರಿಂದ ಈ ಮಾರ್ಗದಲ್ಲಿ ಸುಮಾರು 20 ನಿಮಿಷ ಮೆಟ್ರೋ ಸಂಚಾರ ಸ್ಥಗಿತಗೊಂಡಿತು. ಈ ಅವಧಿಯಲ್ಲಿ ಇಂದಿರಾನಗರ-ವೈಟ್​ಫೀಲ್ಡ್​ ಹಾಗೂ ಚಲ್ಲಟ್ಟ& ಎಂ.ಜಿ.ರಸ್ತೆ ನಿಲ್ದಾಣಗಳ ನಡುವೆ ಮೆಟ್ರೋ ರೈಲು ಕಾರ್ಯಾಚರಿಸಿತು.

ಬಿಎಂಆರ್​ಸಿಎಲ್​ ಹಾಗೂ ಬಿಬಿಎಂಪಿ ಸಿಬ್ಬಂದಿ ಹಳಿ ಮೇಲೆ ಬಿದ್ದಿದ್ದ ಮರದ ಕೊಂಬೆ ತೆರವುಗೊಳಿಸಿದ ಬಳಿಕ ಎಂದಿನಂತೆ ನೇರಳೆ ಮಾರ್ಗದಲ್ಲಿ ಮೆಟ್ರೋ ರೈಲು ಸಂಚರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net