

ತುಮಕೂರು: ಆತಿಥೇಯ ತುಮಕೂರು, ದಾವಣಗೆರೆ , ಬೆಂಗಳೂರು ದಕ್ಷಿಣ ಹಾಗೂ ಚಿತ್ರದುರ್ಗ ತಂಡದ ಬಾಲಕರು 17 ರ ವಯೋಮಿತಿ ವಿಭಾಗದಲ್ಲಿ ಉತ್ತಮ ಪ್ರದರ್ಶನ ತೋರಿ ಬೆಂಗಳೂರು ವಿಭಾಗ ಮಟ್ಟದ ಪ್ರೌಡಶಾಲಾ ಖೋಖೋ ಪಂದ್ಯಾವಳಿಯಲ್ಲಿ ಸೆಮಿೈನಲ್ ಪ್ರವೇಶಿಸಿವೆ.
ಜಿಲ್ಲಾಡಳಿತ, ಶಾಲಾ ಶಿಕ್ಷಣಇಲಾಖೆ ಮತ್ತು ಸವೋರ್ದಯ ಶಿಕ್ಷಣಸಂಸ್ಥೆ ಸಹಯೋಗದಲ್ಲಿ ಸವೋರ್ದಯ ಆಟದ ಮೈದಾನದಲ್ಲಿ ಆರಂಭವಾದ 14 ಮತ್ತು 17ರ ವಯೋಮಿತಿ ಬಾಲಕ, ಬಾಲಕಿಯರ ಬೆಂಗಳೂರು ವಿಭಾಗ ಮಟ್ಟದ ಪಂದ್ಯಾವಳಿಯ ಪ್ರೌಢಶಾಲ ವಿಭಾಗದಲ್ಲಿ ಆತಿಥೇಯ ತುಮಕೂರು ತಂಡ ಸುಲಭವಾಗಿ ಮಧುಗಿರಿ ತಂಡವನ್ನು 18-3 ಅಂಕಗಳ ಅಂತರದಿಂದ ಇನ್ನಿಂಗ್ಸ್ ಜಯಗಳಿಸಿ ಸೆಮಿೈನಲ್ಗೆ ದಾಪುಗಾಲಿಟ್ಟಿತು.
ಬೆಂಗಳೂರು ದಕ್ಷಿಣ ತಂಡದ ಬಾಲಕರು ರೋಚಕ ಹಣಾಹಣಿಯಿಂದ ಕೂಡಿದ್ದ ಪಂದ್ಯದಲ್ಲಿ ಶಿವಮೊಗ್ಗ ತಂಡವನ್ನು 12-11 ಅಂಕಗಳ ಅಂತರದಿಂದ ಮಣಿಸಿ ಸೆಮಿೈನಲ್ ಪ್ರವೇಶಿಸಿದರು. ಚಿತ್ರದುರ್ಗ ತಂಡ 9-7 ಅಂಕಗಳಿಂದ ರಾಮನಗರ ವಿರುದ್ಧ ಜಯಗಳಿಸಿದರೆ, ದಾವಣಗೆರೆ ತಂಡ 18-9 ಅಂಕಗಳಿಂದ ಬೆಂಗಳೂರು ಉತ್ತರ ತಂಡ ಮಣಿಸಿ ಸೆಮಿೈನಲ್ಗೆ ಲಗ್ಗೆಯಿಟ್ಟವು.
ಬಾಲಕಿಯರ ವಿಭಾಗ: ಬಾಲಕಿಯರ ವಿಭಾಗದಲ್ಲು ಆತಿಥೇಯ ತುಮಕೂರು ತಂಡ ಸೆಮಿೈನಲ್ಗೆ ಅರ್ಹತೆ ಪಡೆದುಕೊಂಡಿತು. ಆತಿತೇಯ ಬಾಲಕಿಯರು 6-5 ಅಂಕಗಳಿಂದ ಚಿತ್ರದುರ್ಗದ ವಿರುದ್ಧ ಪ್ರಯಾಸಕರ ಗೆಲುವು ಸಾಧಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದರು.
ಬೆಂಗಳೂರು ದಕ್ಷಿಣ ತಂಡವು 15-10 ಅಂಕಗಳಿಂದ ಚಿಕ್ಕಬಳ್ಳಾಪುರ ವಿರುದ್ಧ ಜಯಗಳಿಸಿ, ದಾವಣಗೆರೆ ತಂಡ 9-4 ಅಂಕಗಳಿಂದ ಬೆಂಗಳೂರು ಗ್ರಾಮಾಂತರ ವಿರುದ್ಧ ಗೆದ್ದು ಹಾಗೂ ಶಿವಮೊಗ್ಗ ತಂಡ 8-5 ರಿಂದ ಬೆಂಗಳೂರು ಉತ್ತರ ವಿರುದ್ಧ ಜಯಗಳಿಸಿ ಸೆಮಿೈನಲ್ ಪ್ರವೇಶಿಸಿದವು.
14 ವಯೋಮಿತಿ: 14 ವಯೋಮಿತಿ ಬಾಲಕರ ವಿಭಾಗದಲ್ಲಿ ತುಮಕೂರು, ಬೆಂಗಳೂರು ದಣ, ಬೆಂಗಳೂರು ಉತ್ತರ ಹಾಗೂ ಕೋಲಾರ ತಂಡಗಳು ಸೆವಿೈನಲ್ಗೆ ಲಗ್ಗೆಯಿಟ್ಟರೆ, ಬಾಲಕಿಯರ ವಿಭಾಗದಲ್ಲಿ ತುಮಕೂರು, ಬೆಂಗಳೂರು, ಕೋಲಾರ ತಂಡಗಳು ನಾಲ್ಕರ ಟ್ಟ ತಲುಪಿದವು.
ಶುಕ್ರವಾರ ಸೆಮಿೈನಲ್, ೈನಲ್ ಪಂದ್ಯಗಳು ನಡೆಯಲಿವೆ.