

ಬೆಂಗಳೂರು: 2023-24ನೇ ಶೈಕ್ಷಣಿಕ ಸಾಲಿನ ಬೆಂಗಳೂರು ನಗರ ವಿಶ್ವವಿದ್ಯಾಾನಿಲಯದ ವ್ಯಾಾಪ್ತಿಯ ಸಂಯೋಜಿತ ಕಾಲೇಜುಗಳಲ್ಲಿ ಎಂ.ಇಡಿ ಕೋರ್ಸು ಪ್ರವೇಶಾತಿಗಾಗಿ ಅರ್ಜಿ ಆಹ್ವಾಾನಿಸಿದೆ.
ಯುಯುಸಿಎಂಎಸ್ ಪೋರ್ಟಲ್‌ನಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಬುಧವಾರದಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ದಂಡ ಶುಲ್ಕ ರಹಿತ ಅರ್ಜಿ ಸಲ್ಲಿಕೆಗೆ ಡಿ.27 ಮತ್ತು 200 ರೂ ದಂಡದೊಂದಿಗೆ ಅರ್ಜಿ ಸಲ್ಲಿಸಲು ಡಿ. 30 ಕೊನೆಯ ದಿನವಾಗಿದೆ.
2024ರ ಜ.3 ರಂದು ಜೇಷ್ಠತಾ ಪಟ್ಟಿ ಪ್ರಕಟಿಸಲಿದೆ. ಜ. 5ರಂದು ಕೌನ್ಸೆಲಿಂಗ್ ನಡೆಯಲಿದೆ. ಜ.10 ದಂಡ ರಹಿತವಾಗಿ ಪ್ರವೇಶಾತಿ ಶುಲ್ಕ ಪಾವತಿಸಲು ಕಡೆಯ ದಿನ. 500 ರೂ ದಂಡದೊಂದಿಗೆ ಪ್ರವೇಶಾತಿ ಶುಲ್ಕವನ್ನು ಪಾವತಿಸಲು ಜ.12 ಕಡೆಯ ದಿನವಾಗಿದೆ ಎಂದು ಬೆಂ.ನಗರ ವಿವಿ ಪ್ರಕಟಣೆ ತಿಳಿಸಿದೆ.