ನಿತ್ಯ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆ ತ್ಯಜಿಸಿ

JUNE.. 5, HNP., PH.1.
Published on

ಹೊಳೆನರಸೀಪುರ: ಪಟ್ಟಣದ ಸರ್ಕಾರಿ ಶುಶ್ರೂಷ ಮಹಾವಿದ್ಯಾಲಯದ ಸಭಾಂಗಣದಲ್ಲಿ ಬುಧವಾರ ವಲಯ ಅರಣ್ಯಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಗಿಡಗಳನ್ನು ನೆಡಲಾಯಿತು.


ಹಿರಿಯ ಸಿವಿಲ್ ನ್ಯಾಯಾಧೀಶೆ ನಿವೇದಿತಾ ಮಹಾಂತೇಶ್ ಮುಳವಳ್ಳಿ ಮಠ್ ಮಾತನಾಡಿ, ನಿತ್ಯ ಗಿಡಗಳನ್ನು ನೆಡುವುದಕ್ಕಿಂತ ಅವುಗಳನ್ನು ಪಾಲನೆ ಮಾಡುವುದು ಮುಖ್ಯ ಎಂದರು.


ಪ್ರಧಾನ ಸಿವಿಲ್ ನ್ಯಾಯಾಧೀಶ ಆರ್.ಜೆ.ಎಸ್.ಪ್ರವೀಣ್ ಮಾತನಾಡಿ, ಜನರು ಪ್ಲಾಸ್ಟಿಕ್ ಬಳಕೆ ತ್ಯಜಿಸಬೇಕು. ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಡಬೇಡಿ. ವರ್ಷ ಪೂರ್ತಿ ಗಿಡಗಳನ್ನು ನೆಡುವ ಮೂಲಕ ನಿತ್ಯ ಪರಿಸರ ದಿನ ಆಚರಿಸೋಣ ಎಂದರು.


ಶುಶ್ರೂಷ ಮಹಾವಿದ್ಯಾಲಯದ ಪ್ರಾಂಶುಪಾಲ ಚಂದ್ರಶೇಖರ ಹಡಪದ, ವಲಯ ಅರಣ್ಯಾಧಿಕಾರಿ ಪಿ.ಸಿ.ದಿಲೀಪ್, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ವಿ.ಶಿವಕುಮಾರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಕೆ.ಎಚ್.ಸಪ್ನಾ, ಶುಶ್ರೂಷ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕದ ಸಂಚಾಲಕಿ ಶೈಲಜಾ, ಉಪ ವಲಯ ಅರಣ್ಯಾಧಿಕಾರಿ ಎಚ್.ಸಿ.ಪ್ರದೀಪ್, ನವೀನ್, ಕುಮಾರಸ್ವಾಮಿ, ಅರಣ್ಯ ರಕ್ಷಕರಾದ ನವೀನ್, ವಿನಯ್, ಮಂಜುನಾಥ್, ಪ್ರವೀಣ್, ಪತ್ರಕರ್ತ ಎಚ್.ವಿ.ಸುರೇಶ್ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net