

ಹಾಸನ: ಅರಸೀಕೆರೆ ತಾಲೂಕು ಬಾಣಾವರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎನ್. ಕುಮಾರಸ್ವಾಮಿ ಅವರನ್ನು ಅಮಾನತುಗೊಳಿಸಿ ಹಾಗೂ ಅರಸೀಕೆರೆ ತಾಲೂಕು ವಸತಿ ನೋಡಲ್ ಅಧಿಕಾರಿ ಪಾಲಾಕ್ಷ ಅವರನ್ನು ಜಿಲ್ಲಾ ಪಂಚಾಯಿತಿ ಸಿಇಒ ಬಿ.ಆರ್.ಪೂರ್ಣಿಮಾ ಕರ್ತವ್ಯದಿಂದ ವಜಾಗೊಳಿಸಿದ್ದಾರೆ.
ಪಿಎಂಎವೈ(ಜಿ) ವಸತಿ ಯೋಜನೆಯಲ್ಲಿ ತಾಲೂಕು ಲಾಗಿನ್ ಅನ್ನು ದುರುಪಯೋಗ ಪಡಿಸಿಕೊಂಡು ಬಾಣವರ ಗ್ರಾಮ ಪಂಚಾಯಿತಿಯ 90 ಅನರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ 27 ಲಕ್ಷ ರೂ.ಗಳನ್ನು ಪಾಲಾಕ್ಷ ಹಾಗೂ ಹೆಚ್ಚುವರಿ ಪ್ರಭಾರ ಜಿಲ್ಲಾ ನೋಡಲ್ ಅಧಿಕಾರಿ ಎಂ.ಕೆ.ರಾಜೇಶ್ ಹಣ ಜಮಾ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪೂರ್ಣಿಮಾ ಕ್ರಮ ಕೈಗೊಂಡಿದ್ದಾರೆ.
ಈ ಮೂವರ ವಿರುದ್ಧ ಅರಸೀಕೆರೆ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.