ಬನಶಂಕರಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಸಂಭ್ರಮ

26ALD 07
ಕಂಪ್ಲಿ ಗ್ರಾಮದ ಶ್ರೀ ಬನಶಂಕರಿ ದೇವಸ್ಥಾನ.
Published on

ಅಳವಂಡಿ: ಸಮೀಪದ ಕಂಪ್ಲಿ ಗ್ರಾಮದ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಪ್ರಯುಕ್ತ ಶ್ರೀದೇವಿ ಪುರಾಣ ಸೆ.22 ರಿಂದ ಪ್ರಾರಂಭವಾಗಿದ್ದು ಪ್ರತಿದಿನ ಪುರಾಣ ಜತೆಗೆ ವಿಶೇಷ ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯುತ್ತಿದೆ.

ದೇವಸ್ಥಾನವನ್ನು ತಳಿರು, ತೋರಣ, ಹೂ, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಪ್ರತಿದಿನ ಬೆಳಗ್ಗೆ ಭಕ್ತರಿಂದ ವಿಶೇಷ ಪೂಜೆ, ಪುನಸ್ಕಾರ, ಅಭಿಷೇಕ ನಂತರ ಮಹಿಳೆಯರಿಂದ ಲಲಿತಾ ಪಾರಾಯಣ ಕಾರ್ಯಕ್ರಮಗಳು ನಡೆಯುತ್ತಿವೆ.

ವಿಜಯದಶಮಿ ದಿವಸ ಬನ್ನಿ ಮುಡಿಯುವ ಕಾರ್ಯಕ್ರಮ ಇದೆ. ಪುರಾಣ ಪಠಣಕಾರರಾಗಿ ಗ್ರಾಮದ ಹಿರಿಯರಾದ ಭೂದಾನಿ ಹನುಮಂತಗೌಡ ಗಾಳಿ ಹಾಗೂ ವೀರಣ್ಣ ಗೊಂಡಬಾಳ ಕಾರ್ಯನಿರ್ವಹಿಸುತ್ತಿದ್ದು, ಕಾಶಿಂಸಾಬ ನದಾಫ್ ಸಂಗೀತ, ಬಸವರಾಜ ಗೋಣಿಸ್ವಾಮಿ ತಬಲಾ ಸಾತ್ ನೀಡುತ್ತಿದ್ದಾರೆ.

ಪ್ರಮುಖರಾದ ಮಲ್ಲಪ್ಪ ಗದ್ದಿ, ಪರಶುರಾಮಗೌಡ್ರ ಗಾಳಿ, ಕೃಷ್ಣಪ್ಪ ಕೊಪ್ಪರದ, ಗಂಗಾಧರಗೌಡ ಜಲಾದಿ, ನಾರಾಯಣಪ್ಪ ಬಿಸನಳ್ಳಿ, ಬಸವರಾಜ ಗೊಂಡಬಾಳ, ನಾಗರಾಜ ಗಾಳಿ, ಕೊಟ್ರೇಶ ಕಡ್ಡಿ, ಕೃಷ್ಣಪ್ಪ ಬಣ್ಣದ, ಸುರೇಶ ಬಿಸನಳ್ಳಿ, ಕೃಷ್ಣಪ್ಪ ಕೊರ್ಲಹಳ್ಳಿ, ಶಂಕ್ರಪ್ಪ ಬಿಸನಳ್ಳಿ, ಪಂಪಣ್ಣ ಶರಣಾರ್ಥಿ, ಭಾಸ್ಕರ ಕಂಪ್ಲಿ ಇತರರಿದ್ದರು.

ಕಂಪ್ಲಿ ಗ್ರಾಮದಲ್ಲಿ ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದ ಪದ್ಧತಿಯಂತೆ ಶ್ರೀದೇವಿ ಪುರಾಣ ಪ್ರವಚನ ನಡೆಸಲಾಗುತ್ತಿದೆ. ಪ್ರತಿದಿನ ಪುರಾಣ ಪ್ರವಚನ, ಲಲಿತಾ ಪಾರಾಯಣ ಇತರ ಕಾರ್ಯಕ್ರಮಗಳು ಭಕ್ತಿಯಿಂದ ನಡೆಯಲಿವೆ. ಹನುಮಂತಗೌಡ ಗಾಳಿ ಭೂದಾನಿ ಕಂಪ್ಲಿ ಕಂಪ್ಲಿ ಗ್ರಾಮದ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಶ್ರೀದೇವಿ ಪುರಾಣ ಭಕ್ತಿ ಸಡಗರದಿಂದ ನಡೆಯುತ್ತಿದೆ. ಈ ನಿಮಿತ್ತ ಬನ್ನಿ ಮುಡಿಯುವ ಕಾರ್ಯಕ್ರಮ, ಅನ್ನ ದಾಸೋಹ ಮುಂತಾದ ಕಾರ್ಯಕ್ರಮ ನಡೆಯುತ್ತವೆ. ಭಕ್ತರು ಶ್ರದ್ಧೆ ಭಕ್ತಿಯಿಂದ ದೇವಿ ಆರಾಧಿಸುತ್ತಾರೆ. ಅನ್ವರಹುಸೇನ ಗಡಾದ ಗ್ರಾಪಂ ಸದಸ್ಯ ಅಳವಂಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net