ಬನಶಂಕರಿ ದೇಗುಲದಲ್ಲಿ ಹುಂಡಿ ಎಣಿಕೆ : 25.64 ಲಕ್ಷ ರೂ. ಕಾಣಿಕೆ

Banashankari temple
Published on

ಬೆಂಗಳೂರು: ನಗರದ ಬನಶಂಕರಿ ದೇವಾಲಯದಲ್ಲಿ ಬುಧವಾರ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಕೇವಲ 25 ದಿನಗಳಲ್ಲಿ 25.64 ಲಕ್ಷ ರೂ.ಗೂ ಅಧಿಕ ಕಾಣಿಕೆ ಸಂಗ್ರಹವಾಗಿದೆ.

ವಿಶೇಷ ದಿನಗಳಲ್ಲದೆ ಎಲ್ಲ ದಿನವೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಆಗಮಿಸುತ್ತಿದ್ದಾರೆ. ಇದರಿಂದ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, 13 ಹುಂಡಿಗಳನ್ನು ತೆರೆದು ಕಾಣಿಕೆ ಹಣ ಎಣಿಕೆ ಮಾಡಲಾಯಿತು. ಇದೇ ತಿಂಗಳು 2ರಂದು 40.71 ಲಕ್ಷ ರೂ. ಕಾಣಿಕೆ ಸಂಗ್ರಹವಾಗಿತ್ತು. ಈಗ ತಿಂಗಳು ಕಳೆಯುವ ಮುನ್ನವೇ 25,64,720 ರೂ. ಕಾಣಿಕೆ ಸಂಗ್ರಹವಾಗಿದೆ ಎಂದು ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀ ತಿಳಿಸಿದ್ದಾರೆ.

ವಿವಿಧ ಮೂಬೆಲೆಯ ನೋಟು ಹಾಗೂ ನಾಣ್ಯಗಳ ಜತೆಗೆ 68 ಗ್ರಾಂ 350 ಮಿಲಿ ಚಿನ್ನ ಹಾಗೂ 332 ಗ್ರಾಂ ಬೆಳ್ಳಿ, 5 ಯುಎಸ್ ಡಾಲರ್ ಹಾಗೂ 10 ಯೂರೊ ನಾಣ್ಯಗಳು ಕೂಡ ಸಂಗ್ರಹವಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net