ಬನಶಂಕರಿ ದೇವಾಲಯದಲ್ಲಿ ಹುಂಡಿಗಳಲ್ಲಿ 30.87 ಲಕ್ಷ ರೂ. ಕಾಣಿಕೆ

BBT
Published on

ಬೆಂಗಳೂರು: ನಗರದ ಬನಶಂಕರಿ ದೇವಾಲಯದಲ್ಲಿ ಶನಿವಾರ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಕೇವಲ 25 ದಿನಗಳಲ್ಲಿ 30.87 ಲಕ್ಷ ಅಧಿಕ ಕಾಣಿಕೆ ಸಂಗ್ರಹವಾಗಿದೆ.

ದೇವಾಲಯದಲ್ಲಿ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ವಿಶೇಷ ದಿನಗಳು ಮಾತ್ರವಲ್ಲದೆ ಸಾಮಾನ್ಯ ದಿನಗಳಲ್ಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇದರಿಂದಾಗಿ ಈ ಬಾರಿ ಕೇವಲ 25 ದಿನಗಳಲ್ಲೇ ದೇವಾಲಯದಲ್ಲಿನ ಎಲ್ಲಾ 13 ಹುಂಡಿಗಳು ತುಂಬಿದ್ದವು. ಈ ಹಿನ್ನೆಲೆಯಲ್ಲಿ ಹುಂಡಿಗಳನ್ನು ತೆರೆದು ಕಾಣಿಕೆ ಹಣ ಎಣಿಕೆ ಮಾಡಲಾಗಿಯಿತು.

ನೋಟುಗಳು 29,58,095 ರೂ. ಹಾಗೂ ನಾಣ್ಯಗಳು 1,29,205 ರೂ. ಸೇರಿ ಒಟ್ಟು 30,87,300 ರೂ. ಕಾಣಿಕೆ ಸಂಗ್ರಹವಾಗಿದೆ ಎಂದು ಬನಶಂಕರಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿ ತಿಳಿಸಿದ್ದಾರೆ.

58 ಗ್ರಾಂ ಚಿನ್ನ: ಹುಂಡಿಗಳಿಂದ 500 ರೂ. ಮುಖಬೆಲೆಯ 2,216 ನೋಟುಗಳು, 200 ರೂ.ನ 659 ನೋಟುಗಳು, 100 ರೂ. 8,592 ಹಾಗೂ 50 ರೂ.ಗಳ 5,876 ನೋಟುಗಳು ಸೇರಿ 20,10 ರೂ. ನೋಟುಗಳು, 5, 2 1 ರೂ. ನಾಣ್ಯಗಳು ಸಂಗ್ರಹವಾಗಿವೆ. ಜತೆಗೆ 58 ಗ್ರಾಂ 140 ಮಿಲಿ ಚಿನ್ನ ಹಾಗೂ 644 ಗ್ರಾಂ ಬೆಳ್ಳಿ ಕಾಣಿಕೆ ಸಂಗ್ರಹವಾಗಿದೆ.

ಯುಎಸ್‌ಎ ಡಾಲರ್: ಕೇವಲ ನೋಟು, ನಾಣ್ಯಗಳೇ ಅಲ್ಲದೆ, ಈ ಬಾರಿ 1,945 ರೂ. ಮೌಲ್ಯದ ಯು.ಎಸ್. ಡಾಲರ್ ಹಾಗೂ ನಿಷೇಧಗೊಂಡಿರುವ 2 ಸಾವಿರ ರೂ. ಮುಖಬೆಲೆಯ ನೋಟು ದೊರೆತಿದೆ. ಕಳೆದ ಡಿ. 4ರಂದು ಹುಂಡಿಗಳ ಎಣಿಕೆ ಮಾಡಿದಾಗ 43,10,952 ರೂ. ಸಂಗ್ರಹವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net