ಬನಶಂಕರಿ ದೇವಾಲಯದಲ್ಲಿ ಹುಂಡಿ ಎಣಿಕೆ:44.04 ಲಕ್ಷ ರೂ. ಕಾಣಿಕೆ

Banashankari temple - 1
Published on

ಬೆಂಗಳೂರು: ಒಂದು ತಿಂಗಳ ನಂತರ ನಗರದ ಬನಶಂಕರಿ ದೇವಾಲಯದಲ್ಲಿ ಸೋಮವಾರ ಹುಂಡಿಗಳ ಎಣಿಕೆ ಕಾರ್ಯ ನಡೆದಿದ್ದು, 44.04 ಲಕ್ಷಕ್ಕೂ ಅಧಿಕ ಕಾಣಿಕೆ ಸಂಗ್ರಹವಾಗಿದೆ.

ದೇವಾಲಯದಲ್ಲಿ ದಿನದಿಂದ ದಿನಕ್ಕೆ (ವಿಶೇಷ ದಿನಗಳು ಮಾತ್ರವಲ್ಲದೆ ಸಾಮಾನ್ಯ ದಿನಗಳಲ್ಲಿಯೂ) ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದಾಗಿ ಈ ಬಾರಿ ಒಂದು ತಿಂಗಳು ಎಂಟು ದಿನಗಳಲ್ಲೇ ದೇವಾಲಯದಲ್ಲಿನ ಎಲ್ಲ್ಲ 13 ಹುಂಡಿಗಳು ಭರ್ತಿಯಾಗಿದ್ದವು. ಈ ಹಿನ್ನೆಲೆ ಹುಂಡಿಗಳನ್ನು ತೆರೆದು ಕಾಣಿಕೆ ಎಣಿಕೆ ಮಾಡಲಾಗಿದೆ. ಕಳೆದ ಮಾರ್ಚ್ 27ರಂದು ಹುಂಡಿಗಳನ್ನು ತೆರೆದಿದ್ದ ವೇಳೆ 25.64 ಲಕ್ಷಕ್ಕೂ ಅಧಿಕ ಕಾಣಿಕೆ ಸಂಗ್ರಹವಾಗಿತ್ತು. ಇದೀಗ 42,38,4,465 ರೂ. ನೋಟುಗಳು ಹಾಗೂ 1,66,375 ರೂ. ನಾಣ್ಯಗಳು ಸೇರಿ ಒಟ್ಟು 44,04,840 ರೂ. ಕಾಣಿಕೆ ಸಂಗ್ರಹವಾಗಿದೆ ಎಂದು ಬನಶಂಕರಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀ ತಿಳಿಸಿದ್ದಾರೆ.

96 ಗ್ರಾಂ ಚಿನ್ನ : ಹುಂಡಿಗಳಿಂದ 500 ರೂ. ಮುಖಬೆಲೆಯ 16,41,500 ನೋಟುಗಳು, 200 ರೂ.ನ 1,076 ನೋಟುಗಳು, 100 ರೂ.ನ 12,29,700 ಹಾಗೂ 50 ರೂ.ನ 7,775 ನೋಟುಗಳು, 20 ರೂ. ಮುಖಬೆಲೆ 21,439 ನೋಟುಗಳು ಸೇರಿ 10, 5, 2 ಹಾಗೂ 1 ರೂ. ನೋಟು ಹಾಗೂ ನಾಣ್ಯಗಳ ಜತೆಗೆ, 96 ಗ್ರಾಂ 100 ಮಿಲಿ ಚಿನ್ನ ಹಾಗೂ 573 ಗ್ರಾಂ ಬೆಳ್ಳಿ ಕಾಣಿಕೆ ಸಂಗ್ರಹವಾಗಿದೆ.

ವಿದೇಶಿ ಕರೆನ್ಸಿಗಳು: ಈ ಬಾರಿ 5 ವಿಯೆಟ್ನಾಂ, ಮಲೇಷಿಯಾ, ಯುಎಸ್‌ಎ, ನೇಪಾಳ, ಭೂತಾನ್, ಥೈಲ್ಯಾಂಡ್ ಕರೆನ್ಸಿಗಳು ಕೂಡ ಸಂಗ್ರಹವಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net