

ಹಿರೇಕೆರೂರ: ತಾಲೂಕಿನ ಚಿಕ್ಕೇರೂರ ಗ್ರಾಮದ ಹೊರವಲಯದಲ್ಲಿನ ಬನಶಂಕರಿ ದೇವಿಯ ಜಾತ್ರಾ ಮಹೋತ್ಸವ ಜ. 11ರಿಂದ 13 ರವರೆಗೆ ನಡೆಯಲಿದೆ.
11ರಂದು ಸಂಜೆ 7 ಗಂಟೆಗೆ ಕಂಕಣಧಾರಣೆ, 12ರಂದು ಹೂವಿನ ರಥೋತ್ಸವ, 13ರಂದು ಬೆಳಗ್ಗೆ 8 ರಿಂದ 8.30 ಗಂಟೆಯವರೆಗೆ ಉಚಿತ ಸಾಮೂಹಿಕ ವಿವಾಹ, 10 ಗಂಟೆಗೆ ಸಕಲವಾದ್ಯ ಮೆಳಗಳೊಂದಿಗೆ ದೇವಿಯ ದೊಡ್ಡ ರಥೋತ್ಸವ, ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಬನಶಂಕರಿದೇವಿ ಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.