ಬ್ಯೂಟಿಶಿಯನ್ ಕೆಲಸಕ್ಕೆ ಬಂದ ಮಣಿಪುರದ ಬೆಡಗಿ...ಸುಲಭವಾಗಿ ಹಣಗಳಿಸಲು ಹೋಗಿ ಪೊಲೀಸರ ಅತಿಥಿಯಾದ ಕಥೆ

mnp pic
Published on

ಬೆಂಗಳೂರು: ಮಾದಕವಸ್ತು ಮಾರಾಟ ಮಾಡುತ್ತಿದ್ದ ಓರ್ವ ಮಹಿಳೆ ಸೇರಿದಂತೆ ಇಬ್ಬರು ಅಂತರಾಜ್ಯ ಪೆಡ್ಲರ್ ಗಳನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಲ್ಲಿ ಮಣಿಪುರ ಮೂಲದ ನಟೋರಿಯಸ್ ಲೇಡಿ ಹೆರಾಯಿನ್ ತಂದು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದಳು. ಬ್ಯೂಟಿಶಿಯನ್ ಕೆಲಸಕ್ಕೆಂದು ಬಂದು ಸುಲಭವಾಗಿ ಹಣ ಸಂಪಾದನೆ ಮಾಡುವ ಸಲುವಾಗಿ ಡ್ರಗ್ಸ್ ದಂಧೆಗೆ ಇಳಿದಿದ್ದಾಳೆ.

ಆರೋಪಿ ಮಹಿಳೆ ಕಮ್ಮನಹಳ್ಳಿಯ ಬ್ಯೂಟಿ ಎಂಡ್ ಸ್ಪಾ ನಲ್ಲಿ ಕೆಲಸ ಮಾಡುತ್ತಿದ್ದು, ಈ ವೇಳೆ ಸ್ನೇಹಿತನ ಜೊತೆ ಸೇರಿ ಹೆರಾಯಿನ್ ಮಾರಾಟ ಮಾಡಿದ್ದಾಳೆ. ಸದ್ಯ ಆರೋಪಿಗಳನ್ನ ಬಂಧಿಸಿರುವ ಬಾಣಸವಾಡಿ ಪೊಲೀಸರು 1.5 ಲಕ್ಷ ರೂ. ಮೌಲ್ಯದ 10 ಗ್ರಾಂ ಹೆರಾಯಿನ್ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net