'ಥ್ಯಾಂಕ್ಯೂ ಕಲೆಕ್ಟರ್ ಡಿ.ಕೆ.ರವಿ' ಅಪಘಾತ ನಡೆಯುವ ಎರಡು ದಿನ ಹಿಂದಷ್ಟೇ ನಟ ಧರಮ್ ತೇಜ್ ಟ್ವೀಟ್..

pic sai dk
Published on

ಖ್ಯಾತ ತೆಲುಗು ನಟ ಸಾಯಿ ಧರಮ್ ತೇಜ್ ಅವರು ಹೈದರಾಬಾದ್​ನ ಮಾದಾಪುರದ ಬಳಿ ಅಪಘಾತಕ್ಕಿಡಾಗಿದ್ದು, ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಡುವೆ ಕರ್ನಾಟಕದ ದಿವಂಗತ ಜಿಲ್ಲಾಧಿಕಾರಿ ಡಿ.ಕೆ. ರವಿ ಅವರ ಬಗ್ಗೆ ಒಳ್ಳೆಯ ಮಾತುಗಳನ್ನಾಡಿ ಟ್ವೀಟ್ ಮಾಡಿರುವ ಬಗ್ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಅಪಘಾತ ನಡೆದ ಎರಡು ದಿನಗಳ ಹಿಂದಷ್ಟೇ ಕೋಲಾರದಲ್ಲಿ ಜನ‌ಮೆಚ್ವಿದ ಜಿಲ್ಲಾಧಿಕಾರಿಯಾಗಿದ್ದ ದಿವಂಗತ ಡಿ.ಕೆ.ರವಿ ಅವರ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್​ ಮಾಡಿದ್ದರು. 'ಥ್ಯಾಂಕ್ಯೂ ಕಲೆಕ್ಟರ್ ಡಿ.ಕೆ.ರವಿ' ಎಂದು ಪೋಸ್ಟ್​ ಮಾಡಿದ್ದರು. ಇದಾದ ಎರಡು ದಿನದಲ್ಲೇ ಆಸ್ಪತ್ರೆ ಸೇರಿರುವ ಧರಮ್​ ಅಪಘಾತದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಐಎಎಸ್ ಅಧಿಕಾರಿ ಪಾತ್ರದಲ್ಲಿ ಸಾಯಿ:

ಸಾಯಿ ಧರಮ್ ತೇಜ್ ಈಗ ಹೊಸ ಸಿನಿಮಾ ಮಾಡಿದ್ದಾರೆ. ಸಿನಿಮಾದ ಟೈಟಲ್ 'ರಿಪಬ್ಲಿಕ್'. ವಿಶೇಷವೆಂದರೆ, ಇದರಲ್ಲಿ ಅವರು ಐಎಎಸ್ ಅಧಿಕಾರಿ ಪಂಜಾ ಅಭಿರಾಮ್ ಎಂಬ ಪಾತ್ರ ಮಾಡಿದ್ದಾರೆ. ಆ ಹಿನ್ನೆಲೆಯಲ್ಲಿ ನಮಗಾಗಿ ಸೇವೆ ಮಾಡಿ, ಪ್ರಾಣ ಕಳೆದುಕೊಂಡ ನಿಜ ಐಎಎಸ್ ಅಧಿಕಾರಿಗಳ ಕಥೆ ಹೇಳುವುದಕ್ಕೆ ಆರಂಭಿಸಿದೆ 'ರಿಪಬ್ಲಿಕ್' ತಂಡ. ಅದರ ಮೊದಲ ಭಾಗವಾಗಿ ದಿವಂಗತ ಡಿ.ಕೆ.ರವಿ ಅವರ ಕಥೆಯನ್ನು ಹೇಳಿದೆ.

ಥ್ಯಾಂಕ್ಯೂ ಕಲೆಕ್ಟರ್ ಡಿ.ಕೆ.ರವಿ:

ಡಿಕೆ ರವಿ ಅವರು ಎಲ್ಲಿಂದ ವೃತ್ತಿಜೀವನ ಆರಂಭಿಸಿದರು. ಯಾವ್ಯಾವ ಊರುಗಳಲ್ಲಿ ಕೆಲಸ ಮಾಡಿದರು. ಯಾವೆಲ್ಲ ಕೆಲಸಗಳನ್ನು ಮಾಡಿದರು. ಜನರಿಗೆ ಯಾವ ರೀತಿ ಸಹಾಯ ಮಾಡಿದರು ಎಂಬಿತ್ಯಾದಿ ಮಾಹಿತಿಗಳನ್ನು  ಚಿತ್ರತಂಡ ಸಿದ್ಧಪಡಿಸಿದೆ. ಅದರಲ್ಲಿ ಡಿಕೆ ರವಿ ಅವರ ವಿಡಿಯೋ ತುಣುಕುಗಳನ್ನು ಸೇರಿಸಲಾಗಿದೆ. ಇದೀಗ ಅದು ಸಖತ್ ವೈರಲ್ ಆಗುತ್ತಿದೆ ಕೂಡ. #ThankYouCollectorDKRAVI ಎಂಬ ಹ್ಯಾಷ್‌ಟ್ಯಾಗ್ ಕೂಡ ಬಳಸಿದೆ.

ಘಟನೆ ಹಿನ್ನೆಲೆ:

ಶುಕ್ರವಾರ ಸಂಜೆ ಧರಮ್​ ತೇಜ್​ ಅವರು ತನ್ನ Triumph Sports ಬೈಕ್​​​ನಲ್ಲಿ ಜುಬ್ಲಿ ಹಿಲ್ಸ್​ನಿಂದ ಗಾಚಿಬೌಲಿ ಕಡೆ ಹೋಗುತ್ತಿದ್ದರು. ರಸ್ತೆಯ ಮೇಲೆ ಮರಳು ಇದ್ದಿದ್ದರಿಂದ ಬೈಕ್ ಕಂಟ್ರೋಲ್ ತಪ್ಪಿ ಸ್ಕಿಡ್ ಆಗಿ ಬಿದ್ದಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net