ಮೊಬೈಲ್​ ಟವರ್​ ನಿರ್ಮಾಣಕ್ಕೆ ಬಾನಂದೂರು ಗ್ರಾಮಸ್ಥರ ವಿರೋಧ

03-bidadi-1
Published on

ಚೇತನ್​ ಚಕ್ಕೆರೆ ಬಿಡದಿ

ಈಗಾಗಲೇ ಗ್ರಾಮದಲ್ಲಿ ಹಾಕಿರುವ ಮೊಬೈಲ್​ ಟವರ್​ನಿಂದ ಹಲವು ತೊಂದರೆಗಳಾಗಿರುವುದೇ ಸಾಕಾಗಿದೆ. ಮತ್ತೊಮ್ಮೆ ಟವರ್​ ಹಾಕುವುದು ಬೇಡ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೊಂದು ಮೊಬೈಲ್​ ಟವರ್​ ನಿರ್ಮಾಣದಿಂದ ಇನ್ನಷ್ಟು ಸಮಸ್ಯೆಗಳು ಕಾಡುವ ಮುನ್ನವೇ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ. ಪಟ್ಟಣ ಸಮೀಪದ ಬಾನಂದೂರು ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಮೊಬೈಲ್​ ಟವರ್​ ಗ್ರಾಮದ ಜನರ ನಿದ್ದಿಗೆಡಿಸಿದೆ. ಈಗಾಗಲೇ ಗ್ರಾಮದಲ್ಲಿ ದೊಡ್ಡ ಮೊಬೈಲ್​ ಟವರ್​ ನಿರ್ಮಾಣ ಮಾಡಲಾಗಿದೆ. ಇದೀಗ ಮತ್ತೊಂದು ಟವರ್​ ನಿರ್ಮಾಣ ಮಾಡಲಾಗುತ್ತಿದೆ. ಟವರ್​ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಗ್ರಾಮಸ್ಥರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಟವರ್​ ನಿರ್ಮಾಣದಿಂದ ಅನಾರೋಗ್ಯ

ಮೊಬೈಲ್​ ಟವರ್​ನಿಂದ ಹೊರಸೂಸುವ ವಿಷಯುಕ್ತ ತರಂಗಗಳಿಂದ ಸ್ಥಳಿಯ ನಿವಾಸಿಗಳ ಮೇಲೆ ಪರಿಣಾಮ ಬೀರಲಿದೆ. ಸದ್ಯ ನಿರ್ಮಿಸುತ್ತಿರುವ ಟವರ್​ ಬಳಿಯೇ 200ಕ್ಕೂ ಹೆಚ್ಚು ಮನೆಗಳು ಇವೆ. ಅಲ್ಲದೇ ಈಗಾಗಲೇ ಗ್ರಾಮದಲ್ಲಿರುವ ಟವರ್​ ಕೇವಲ100 ಮೀ. ಅಂತರದಲ್ಲಿದೆ. ಚಿಕ್ಕ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ, ಸುತ್ತಲಿನ ಪ್ರದೇಶದಲ್ಲಿ ಅನೇಕ ಶಾಲೆಗಳಿವೆ. ಆದ್ದರಿಂದ ಟವರ್​ ನಿರ್ಮಾಣದಿಂದ ಸುತ್ತಲಿನ ವಾತಾವರಣ ಹದಗೆಡಲಿದೆ.

ಟವರ್​ ಪಕ್ಕದಲ್ಲೆ ಇನ್ನೊಂದು ಟವರ್​

ಈಗಾಗಲೇ ಗ್ರಾಮದಲ್ಲಿ ಬೃಹತ್​ ಮೊಬೈಲ್​ ಟವರ್​ ಇದೆ. ಹೀಗಿರುವಾಗ ಇನ್ನೊಂದು ಟವರ್​ ನಿರ್ಮಾಣ ಮಾಡಲಾಗುತ್ತಿದೆ. ಈಗಿರುವ ಟವರ್​ನ ಕೂಗಳತೆ ದೂರದಲ್ಲೆ ಮತ್ತೊಂದು ಟವರ್​ ನಿರ್ಮಾಣ ಮಾಡಲಾಗುತ್ತಿದೆ.

ನಮ್ಮ ಗ್ರಾಮದಲ್ಲಿ ಮೊದಲೆ ಇರುವ ಟವರ್​ ನಿಂದ ಗ್ರಾಮದಲ್ಲಿನ ಜನರ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರಿದೆ. ಇಂತಹ ಸಮಯದಲ್ಲಿ ಅದರ ಕೂಗಳತೆ ದೂರದಲ್ಲೆ ಇನ್ನೊಂದು ಟವರ್​ ನಿರ್ಮಾಣ ಮಾಡಲು ಅಧಿಕಾರಿಗಳು ಅನುವು ಮಾಡಿಕೊಟ್ಟಿದ್ದಾರೆ. ಮೊಬೈಲ್​ ಟವರ್​ ನಿರ್ಮಾಣ ಮಾಡದಂತೆ ಪುರಸಭೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳ ರ್ನಿಲಕ್ಷ$್ಯತನ ಎದ್ದು ಕಾಣುತ್ತಿದೆ.

 ಜಗದೀಶ್​, ಬಾನಂದೂರು

ಗ್ರಾಮದಲ್ಲಿರುವ ಟವರ್​ನಿಂದ ಈಗಾಗಲೇ ಸಾಕಷ್ಟು ಅನನುಕೂಲಗಳಾಗಿವೆ. ಹಲವು ಮಂದಿಗೆ ಕಿಡ್ನಿ ಹಾಗೂ ಕ್ಯಾನ್ಸರ್​ ರೋಗಗಳು ಕಾಣಿಸಿಕೊಂಡಿವೆ. ಹಲವು ಪಗಳ ಜೀವಕ್ಕೂ ಇದು ಅಪಾಯ ತಂದಿದೆ. ಹೀಗಿರುವಾಗ ಮತ್ತೆ ಇನ್ನೊಂದು ಟವರ್​ ನಿರ್ಮಾಣ ಮಾಡುತ್ತಿರುವುದು ನಮ್ಮಲ್ಲಿ ಇನ್ನಷ್ಟು ಆತಂಕ ಹೆಚ್ಚಿಸಿದೆ.

ಬಸವರಾಜು, ಗ್ರಾಮಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net