

ಕಾಸರಗೋಡು: ತಿರುವನಂತಪುರದಲ್ಲಿ ನಡೆಯುತ್ತಿರುವ ರಾಜ್ಯ ಶಾಲಾ ಕಲಾಮೇಳದಲ್ಲಿ ಕಾಸರಗೋಡು ಬಾನಂ ಸರ್ಕಾರಿ ಪ್ರೌಢಶಾಲೆ ಮಂಗಲಂಕಳಿ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ‘ಎ’ ಗ್ರೇಡ್ ಪಡೆಯುವ ಮೂಲಕ ಐತಿಹಾಸಿಕ ಸಾಧನೆ ಮಾಡಿದೆ.
ಮಂಗಳಂಕಳಿ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳ ಮಾವಿಲನ್ ಮತ್ತು ಮಲವೇಟುವನ್ ಸಮುದಾಯಗಳ ವಿಶಿಷ್ಟ ಕಲಾರೂಪವಾಗಿದ್ದು, ರಾಜ್ಯಮಟ್ಟದ ಶಾಲಾ ಕಲೋತ್ಸವದಲ್ಲಿ ಬಾನಂ ಶಾಲಾ ವಿದ್ಯಾರ್ಥಿಗಳು ಕಲಾತ್ಮಕವಾಗಿ ಪ್ರಸ್ತುತಪಡಿಸಿದ್ದರು. ಸುನೀಲ್ ಬಾನಂ ಮತ್ತು ಸುನೀತಾ ದಂಪತಿ ತರಬೇತುದಾರರಾಗಿದ್ದಾರೆ.
ವಿಜೇತ ತಂಡವನ್ನು ನೀಲೇಶ್ವರ ರೈಲು ನಿಲ್ದಾಣದಲ್ಲಿ ಬರಮಾಡಿಕೊಳ್ಳಲಾಯಿತು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಪಿ.ಮನೋಜ್ ಕುಮಾರ್, ಉಪಾಧ್ಯಕ್ಷ ಪಿ.ರಾಜೀವ್, ಎಸ್‌ಎಂಸಿ ಅಧ್ಯಕ್ಷ ಬಾನಂ ಕೃಷ್ಣನ್, ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಎನ್.ಭಾಸ್ಕರನ್, ಮುಖ್ಯ ಶಿಕ್ಷಕಿ ಸಿ.ಕೋಮಲವಲ್ಲಿ, ಹಿರಿಯ ಸಹಾಯಕ ಪಿ.ಕೆ.ಬಾಲಚಂದ್ರನ್ ಮತ್ತು ತಂಡದ ವ್ಯವಸ್ಥಾಪಕ ಅನೂಪ್ ಪೆರಿಯಾಲ್ ಉಪಸ್ಥಿತರಿದ್ದರು.
\https://www.vijayavani.net/social-workers-are-inspired-by-the-award