ಗಣೇಶ್ ಅಭಿನಯದ ‘ಬಾನದಾರಿಯಲ್ಲಿ’ ಚಿತ್ರತಂಡ ಮಂಗಳೂರಿನಿಂದ ಆಫ್ರಿಕಾದತ್ತ...

ganesh
Published on

ಬೆಂಗಳೂರು: ಗಣೇಶ್ ಅಭಿನಯದ ‘ಬಾನದಾರಿಯಲ್ಲಿ’ ಚಿತ್ರತಂಡವು ಸದ್ಯದಲ್ಲೇ ಆಫ್ರಿಕಾಗೆ ಪ್ರಯಾಣ ಬೆಳೆಸಲಿದೆ.

ಅಲ್ಲಿ ಚಿತ್ರಕ್ಕೆ ಒಂದಿಷ್ಟು ಮಹತ್ವದ ದೃಶ್ಯಗಳನ್ನು ಚಿತ್ರೀಕರಣ ಮಾಡುವುದಕ್ಕೆ ಚಿತ್ರತಂಡ ಸಜ್ಜಾಗಿದೆ. ಅದ್ಕಕೂ ಮುನ್ನ, ಸದ್ಯ ಮಂಗಳೂರಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ವಾಟರ್ ಗೇಮ್ಸ್​ ಸೇರಿದಂತೆ ಹಲವು ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳಲಾಗುತ್ತಿದೆ.

ಗಣೇಶ್ ಮೊದಲ ಬಾರಿಗೆ ಕ್ರಿಕೆಟಿಗನಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ನಾಯಕಿ ರುಕ್ಮಿಣಿ ವಸಂತ್ ಈಜುಗಾರ್ತಿಯಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಈ ಚಿತ್ರವನ್ನು ಪ್ರೀತಂ ಗುಬ್ಬಿ ನಿರ್ದೇಶಿಸುತ್ತಿದ್ದು, ಗಣೇಶ್ ಮತ್ತು ಪ್ರೀತಂ ಜೋಡಿಯ ನಾಲ್ಕನೇ ಚಿತ್ರ ಇದಾಗಿದೆ.

ಇದುವರೆಗೂ ತಮ್ಮದೇ ಕಥೆ ನಿರ್ದೇಶಿಸುತ್ತಿದ್ದ ಪ್ರೀತಂ, ಈ ಬಾರಿ ಛಾಯಾಗ್ರಾಹಕಿ ಪ್ರೀತಾ ಜಯರಾಂ ಅವರ ಕಥೆಯನ್ನಾಧರಿಸಿ ಚಿತ್ರಕಥೆ ಬರೆದಿದ್ದಾರೆ. ಮಾಸ್ತಿ ಮಂಜು ಸಂಭಾಷಣೆ, ಅರ್ಜುನ್ ಜನ್ಯ ಸಂಗೀತ, ಅಭಿಲಾಷ್ ಕಲ್ಲತ್ತಿ ಛಾಯಾಗ್ರಹಣವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net