ಲೇಬರ್​ ಕೋಡ್​ ರದ್ಧತಿಗೆ ಪಟ್ಟು

Sudhee_09_JCTU_Protest_@_Freedom_Park (6)
Published on

ಬೆಂಗಳೂರು: ಲೇಬರ್​ ಕೋಡ್​ ರದ್ದು ಮಾಡುವುದು ಸೇರಿ ವಿವಿಧ ಹಕ್ಕೋತ್ತಾಯ ಈಡೇರಿಕೆಗೆ ಒತ್ತಾಯಿಸಿ ಕಾರ್ಮಿಕ ಸಂಟನೆಗಳ ಜಂಟಿ ಸಮಿತಿ ಸ್ವಾತಂತ್ರ ಉದ್ಯಾನವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಪ್ರತಿಭಟನಾ ಸಭೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು.

ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಹಲವು ಸಂಟನೆಗಳ ಕಾರ್ಮಿಕರ ಕೈಯಲ್ಲಿ ಕಾರ್ಮಿಕ ಸಂಟನೆಯ ನೂರಾರು ಧ್ವಜಗಳು ರಾರಾಜಿಸುತ್ತಿದ್ದರೆ, ಮತ್ತೊಂದೆಡೆ ನಾಮಫಲಕ ಹಿಡಿದು ೂಷಣೆ ಕೂಗಿ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದ್ದು, ಕಾರ್ಮಿಕ ಸಚಿವರು ಬರುವವರೆಗೂ ಪ್ರತಿಭಟನಾ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.

ಇತ್ತ ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದ್ದಂತೆ ಕಾರ್ಮಿಕ ಇಲಾಖೆಯ ಆಯುಕ್ತರು ಆಗಮಿಸಿ ಪ್ರತಿಭಟನಾ ನಿರತರನ್ನು ಭೇಟಿ ಮಾಡಿ ಅಹವಾಲು ಸ್ವೀಕರಿಸಿದರು. ಕಾರ್ಮಿಕ ಸಚಿವರಿಗೆ ನಿಮ್ಮ ಮನವಿಯನ್ನು ತಲುಪಿಸುವುದಾಗಿ ಭರವಸೆ ನೀಡಿದ ಆಯುಕ್ತರು, ಶ್ರೀದಲ್ಲೇ ಈ ಕುರಿತು ಚರ್ಚಿಸಲು ಸಭೆ ಕರೆಯುವುದಾಗಿ ಆಶ್ವಾಸನೆ ಕೊಟ್ಟ ಬಳಿಕ ಮುಷ್ಕರ ಅಂತ್ಯಗೊಳಿಸಲಾಯಿತು.

ಸಭೆ ಕರೆಯಲು ಪಟ್ಟು: ಡಿಸಿಎಂ ಉದ್ದಿಮೆದಾರರ ಸಂದ ಸಭೆಯಲ್ಲಿ ಮಾತನಾಡುತ್ತಾ ರಾಜ್ಯದಲ್ಲಿ ಕನಿಷ್ಠ ವೇತನ ಹೆಚ್ಚಳವನ್ನು ಮಾಡುವುದಿಲ್ಲ ಎಂದು ಅಭಯ ನೀಡಿದ್ದಾರೆ. ಇದು ವೇತನ ಹೆಚ್ಚಳದ ನಿರೀೆಯಲ್ಲಿರುವ ಲಾಂತರ ಕಾರ್ಮಿಕರನ್ನು ಆಘಾತಗೊಳಿಸಿದೆ. ದುಡಿಮೆಯ ಅವಧಿಯ ಹೆಚ್ಚಳವನ್ನು ನಾವೆಲ್ಲ ಕಾರ್ಮಿಕ ಇಲಾಖೆ ಕಾರ್ಯದರ್ಶಿಯವರ ಸಭೆಯಲ್ಲಿ ವಿರೋಧಿಸಿದರೂ ಫಲಕಾರಿಯಾಗಿಲ್ಲ. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಹಣವು ದೊಡ್ಡ ಪ್ರಮಾಣದಲ್ಲಿ ದುರುಪಯೋಗವಾಗುತ್ತಿದೆ. ಸಿಎಂ ಆದಷ್ಟು ಬೇಗ ಎಲ ಕಾರ್ಮಿಕ ಸಂಟನೆಗಳನ್ನೊಳಗೊಂಡ ಸಭೆಯೊಂದನ್ನು ಕಾರ್ಮಿಕ ಸಚಿವರು, ಕಾರ್ಯದರ್ಶಿಗಳು ಮತ್ತು ಆಯುಕ್ತರ ಉಪಸ್ಥಿತಿಯಲ್ಲಿ ಕರೆಯಬೇಕು ಎಂದು ಪ್ರತಿಭಟನೆಯಲ್ಲಿ ಭಾಗಿಯಾದ ವಿವಿಧ ಸಂಟನೆಗಳ ಮುಖಂಡರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಐಎನ್​ಟಿಯುಸಿಯ ಪ್ರಧಾನ ಕಾರ್ಯದರ್ಶಿ ಶಾಮಣ್ಣ ರೆಡ್ಡಿ, ಎಐಟಿಯುಸಿಯ ಪ್ರಧಾನ ಕಾರ್ಯದರ್ಶಿ ವಿಜಯ್​ ಭಾಸ್ಕರ್​, ಸಿಐಟಿಯು ರಾಜ್ಯಾಧ್ಯೆಕ್ಷೆ ವರಲಕ್ಷ್ಮೀ, ಎಚ್​ಎಂಎಸ್​ನ ರಾಜ್ಯಾಧ್ಯಕ್ಷ ನಾಗನಾಥ್​ ಮತ್ತಿತರರು ಉಪಸ್ಥಿತರಿದ್ದರು.

ಹಕ್ಕೋತ್ತಾಯಗಳೇನು ?

*ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುವ ಲೇಬರ್​ ಕೋಡ್​ ರದ್ದಾಗಲಿ.

*ಕನಿಷ್ಠ ವೇತನದ ಹೆಚ್ಚಳಕ್ಕೆ ಅಂತಿಮ ಅಧಿಸೂಚನೆ ಈ ಕೂಡಲೇ ಹೊರಡಿಸಬೇಕು.

*ಎಲ್ಲಾ ರೀತಿಯ ಭೂಸ್ವಾಧಿನ ಈ ಕೂಡಲೇ ನಿಲ್ಲಿಸಬೇಕು.

*ದುಡಿತದ ಅವಧಿಯ ಹೆಚ್ಚಳ ಬೇಡ. ಮಹಿಳೆಯರಿಗೆ ರಾತ್ರಿ ಪಾಳಿಯ ಅನುಮತಿಯನ್ನು ಹಿಂಪಡೆಯಿರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net