

ಬೆಂಗಳೂರು: ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟ (ಬಮೂಲ್)ದ ಕನಕಪುರ ನಿರ್ದೇಶಕ ಸ್ಥಾನಕ್ಕೆ ಮಾಜಿ ಸಂಸದ ಡಿ.ಕೆ.ಸುರೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆಯ್ಕೆ ನಿರೀತವಾಗಿದ್ದರೂ ಮುಂದಿನ ಬೆಳವಣಿಗೆ ಅನಿರೀತ ತಿರುವು ಪಡೆಯಲಿದೆ ಎಂಬ ಚರ್ಚೆ, ಕುತೂಹಲ ಆಡಳಿತ ಪಕ್ಷದೊಳಗೆ ಹುಟ್ಟಿ ಹಾಕಿದೆ. ಕರ್ನಾಟ ಹಾಲು ಮಹಾಮಂಡಳಿ (ಕೆಎಂಎ್) ಅಧ್ಯಕ್ಷ, ಮಾಜಿ ಶಾಸಕ ಭೀಮಾನಾಯ್ಕ ಪದಾವಧಿ ಜೂನ್ಗೆ ಕೊನೆಗೊಳ್ಳಲಿದೆ. ಇದೀಗ ಬಮೂಲ್ ಮುಖೇನ ಡಿ.ಕೆ.ಸುರೇಶ್ ಸಹಕಾರ ಕ್ಷೇತ್ರ ಪ್ರವೇಶ ಮಾಡಿದ್ದು, ಕೆಎಂಎ್ ಅಧ್ಯಕ್ಷ ಸ್ಥಾನಕ್ಕೆ ಹೆಸರು ಪರಿಗಣಿಸಿದರೂ ಅಚ್ಚರಿಯಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ. ಸಹಕಾರ ಕ್ಷೇತ್ರದಲ್ಲಿ ಪಕ್ಷದ ವಿಚಾರ ಬರುವುದಿಲ್ಲ. ಚುನಾವಣೆ ಆಧಾರದಲ್ಲಿ ನಡೆಯುತ್ತದೆ ಎಂದು ಡಿ.ಕೆ.ಸುರೇಶಚ್ ಹೇಳಿಕೊಂಡಿದ್ದಾರೆ. ಆದರೆ ನಿರ್ದೇಶಕ ಸ್ಥಾನಕ್ಕೆ ಸೀಮಿತರಾಗಲು ಉಳಿಯುತ್ತಾರಾ ? ಎನ್ನುವ ಪ್ರಶ್ನೆಯೇ ಮುಂದಿನ ಬೆಳವಣಿಗೆಗೆ ದಿಕ್ಸೂಚಿಯಾಗಿದೆ.
ಕೆಎಂಎ್ ಅಧ್ಯಕ್ಷರಾಗಿದ್ದ ಬಿಜೆಪಿಯ ಬಾಲಚಂದ್ರ ಜಾರಕಿಹೊಳಿ ಅವಧಿಗೆ ಮುನ್ನ ಜಾಗ ಖಾಲಿ ಮಾಡಿ, ಸಿಎಂ ಸಿದ್ದರಾಮಯ್ಯ ಆಪ್ತರಲ್ಲಿ ಒಬ್ಬರಾದ ಭೀಮಾನಾಯ್ಕಗೆ ದಾರಿ ಮಾಡಿಕೊಟ್ಟಿದ್ದರು. ಈ ನಿರ್ಧಾರದ ಹಿಂದೆ ಸಿಎಂ ಸಿದ್ದರಾಮಯ್ಯ ಆಪ್ತತೆ ಪ್ರಭಾವಬೀರಿತ್ತು ಎಂದು ಹೇಳಲಾಗಿದೆ.
ಹೀಗಾಗಿ ಕೆಎಂಎ್ ಅಧ್ಯಕ್ಷ ಸ್ಥಾನಕ್ಕೆ ಜೂನ್ನ ಸಂಭಾವ್ಯ ಚುನಾವಣೆಯು ಆಡಳಿತ ಪಕ್ಷದೊಳಗೆ ಮತ್ತೊಂದು ಸುತ್ತಿನ ಪೈಪೋಟಿಯನ್ನು ತಳ್ಳಿಹಾಕುವಂತಿಲ್ಲ ಎಂದು ಪಕ್ಷದ ಮೂಲಗಳು ಹೇಳುತ್ತಿವೆ.