ಬಲ್ಲಟಗಿ ಜಡಿಸ್ವಾಮಿ ಜಾತ್ರೆ ಅದ್ದೂರಿ

8mnv02
ಬಲ್ಲಟಗಿ ಗ್ರಾಮದಲ್ಲಿ ಜಡಿಸ್ವಾಮಿ ಶಿವಯೋಗಿಗಳ ಜಾತ್ರಾ ಮಹೋತ್ಸವ ಶ್ರೀಮಠದ ಗುರುಬಸ್ಸಯ್ಯತಾತನವರ ನೇತೃತ್ವದಲ್ಲಿ ಕುದುರೆ ಕುಣಿತ ಜರುಗಿತು.
Published on

ಮಾನ್ವಿ: ಬಲ್ಲಟಗಿ ಗ್ರಾಮದ ಜಡಿಸ್ವಾಮಿ ಶಿವಯೋಗಿಗಳ ಜಾತ್ರಾ ಮಹೋತ್ಸವ ಹಾಗೂ ನಂದಿ ಆಗಮ ಮಹಾಪುರಣಾ ಮಂಗಳ ಕಾರ್ಯಕ್ರಮ ಭಾನುವಾರ ಅದ್ದೂರಿಯಾಗಿ ಜರುಗಿತು.

ಶ್ರೀಮಠದ ಗುರುಬಸ್ಸಯ್ಯತಾತನವರ ನೇತೃತ್ವದಲ್ಲಿ ಜಡಿಸ್ವಾಮಿ ಶಿವಯೋಗಿಗಳ ಸಪ್ತಾಹ ಪ್ರಾರಂಭಗೊಂಡಿತು, ಶನಿವಾರ ನಂದಿ ಆಗಮ ಪುರಾಣ ಹಾಗೂ ಸಪ್ತಾಹ ಭಜನೆ ಮಂಗಲ ನಿಮಿತ್ಯ ಬೆಳಗ್ಗೆ 7ರಿಂದ ಶ್ರೀಗಳ ಕರ್ತೃಗದ್ದುಗೆಗೆ ರುದ್ರಾಭಿಷೇಕ, 101 ಬಾಲ ಮುತ್ತೈದೆಯರಿಂದ ಕುಂಬ ಅಭಿಷೇಕ ಜರುಗಿತು.

ಶ್ರೀಮಠದ ಗುರುಬಸ್ಸಯ್ಯತಾತನವರಿಂದ ಕುದುರೆ ಕುಣಿತ, ನಂದಿಕೋಲ ಸೇವೆ, ಬಸಯ್ಯಸ್ವಾಮಿ ಯಮನೂರು ಇವರಿಂದ ಪುರವಂತಿಕೆ ಸೇವೆ, ಗಂಗಾ ಪೂಜೆ ನೇರವೆರಿತು.

ನಿಲೋಗಲ್ಲ ಬೃಹನ್ಮಠದ ಡಾ.ಪಂಚಾಕ್ಷರಿ ಶಿವಾಚಾರ್ಯ ಸ್ವಾಮಿಗಳು, ಗಂಗಾಧರಪ್ಪತಾತನವರು ನವಲಕಲ್, ಬಲ್ಲಟಗಿ ಶ್ರೀಮಠದ ಲಿಂಗಾನಂದ ಸ್ವಾಮಿ, ಬಸ್ಸಯ್ಯಸ್ವಾಮಿ, ಶಾಸಕ ಹಂಪಯ್ಯನಾಯಕ, ಗ್ರಾಮದ ಮುಖಂಡರಾದ ಮಲ್ಲಣ್ಣ ಸಾಹುಕಾರ, ಉದ್ದಪ್ಪ ಸಾಹುಕಾರ, ಅಮರೇಶಸ್ವಾಮಿ ಬಲ್ಲಟಗಿ, ವೈ.ಬಸನಗೌಡ, ಅಮರೇಗೌಡ ಯರಿದಾಳ, ಶರಣಗೌಡ ಪಾಟೀಲ್, ವೀರೇಶ ಎನ್. ಹೊಸೂರು, ವೈ.ರಾಜಶೇಖರ, ಅರುಣಕುಮಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net