ನಾಡಿದ್ದು ಲಕ್ಷ್ಮೀದೇವಿ ಜಾತ್ರೆ

web4
Published on

ಗುರ್ಲಾಪುರ: ಇಲ್ಲಿನ ಶ್ರೀ ಲಕ್ಷ್ಮೀದೇವಿ ಜಾತ್ರೆ ಅ.10ರಿಂದ 11ರ ವರೆಗೆ ಜರುಗಲಿದೆ. ಅ.10ರಂದು ಬೆಳಗ್ಗೆ ಶ್ರೀ ಲಕ್ಷ್ಮೀ ದೇವಿಗೆ ಉಡಿ ತುಂಬುವ ಕಾರ್ಯಕ್ರಮ, ದೀರ್ಘದಂಡ ನಮಸ್ಕಾರ, ನೈವೇದ್ಯ ಅರ್ಪಣೆ, ಸಂಜೆ ಖಾನಟ್ಟಿಯ ಶ್ರೀ ಶಿವಲಿಂಗೇಶ್ವರ ದೇವರ ಪಲ್ಲಕ್ಕಿ ಆಗಮನ, ಸ್ಥಳೀಯ ಎಲ್ಲ ದೇವರುಗಳ ಒಕ್ಕೂಟದಿಂದ ಪಲ್ಲಕ್ಕಿ ಉತ್ಸವ, ರಾತ್ರಿ ಡೊಳ್ಳಿನ ಪದಗಳು ಜರುಗಲಿವೆ.

ಅ.11ರಂದು ಬೆಳಗ್ಗೆ ಶ್ರೀ ಲಕ್ಷ್ಮೀ ದೇವಸ್ಥಾನದಿಂದ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ಎಲ್ಲ ದೇವರುಗಳ ಪಲ್ಲಕ್ಕಿ ಉತ್ಸವ, ದತ್ತಿ ಆಟ, ಧಾರ್ಮಿಕ ಕಾರ್ಯಕ್ರಮಗಳು ಜರುಗುವವು. ಜಾತ್ರೆ ನಿಮಿತ್ತ ಅ.8 ಮತ್ತು 9ರಂದು ಅಂತಾರಾಜ್ಯಮಟ್ಟದ ಪುರುಷರು ಹಾಗೂ ಮಹಿಳೆಯರ ಮುಕ್ತ ಕಬಡ್ಡಿ ಪಂದ್ಯಾವಳಿಗಳು ಜರುಗುವವು. ಮೂಡಲಗಿ ಸಿದ್ದ ಸಂಸ್ಥಾನ ಮಠದ ದತ್ತಾತ್ರೇಯ ಬೋಧ ಸ್ವಾಮೀಜಿ ಹಾಗೂ ಶ್ರೀಧರಬೋಧ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷತೆ, ಅತಿಥಿಗಳಾಗಿ ಡಾ.ಶ್ರೀನಿವಾಸ ಕನಕರೆಡ್ಡಿ, ರಾಹುಲ ಜಾರಕಿಹೊಳಿ, ಸರ್ವೋತ್ತಮ ಜಾರಕಿಹೊಳಿ, ಪಿಎಸ್‌ಐ ಹಾಲಪ್ಪ ಬಾಲದಂಡಿ, ಮಾರುತಿ ಶಾಬನ್ನವರ, ಅಶೋಕ ಮುಗಳಖೋಡ, ಶಿವಲಿಂಗ ಪುಟಾಣಿ, ಶಿವಾನಂದ ದೇವಪ್ಪರಹಟ್ಟಿ ಪಾಲ್ಗೊಳ್ಳಲಿದ್ದಾರೆ ಎಂದು ದೇವಸ್ಥಾನದ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net