ಸಿರುಗುಪ್ಪ ತಹಸೀಲ್ದಾರ್​ ಪತ್ನಿ ಅನುಮಾನಸ್ಪದ ಸಾವು

Koodligi
Published on

ಬಳ್ಳಾರಿ: ಸಿರುಗುಪ್ಪ ತಹಸೀಲ್ದಾರ್​ ಪತ್ನಿ ಅನುಮಾನಸ್ಪದವಾಗಿ ಸಾವಿಗೀಡಾಗಿದ್ದು, ತಹಸೀಲ್ದಾರ್​ ಗೃಹ ಕಚೇರಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ತಹಸೀಲ್ದಾರ್ ಸತೀಶ(ಸಾಯಿಬಣ್ಣ) ಬಿ.ಕೂಡ್ಲಿಗಿ ಅವರ ಪತ್ನಿ ಶಂಕ್ರಮ್ಮ ಮೃತ ದುರ್ದೈವಿ. ಇತ್ತೀಚೆಗೆ ಚುನಾವಣಾ ಕರ್ತವ್ಯ ಹಿನ್ನಲೆ ಬಳ್ಳಾರಿ ಡಿಸಿ ಕಚೇರಿಗೆ ಸತೀಶ್​ ವರ್ಗವಣೆಯಾಗಿದ್ದರು. ಆದರೆ, ಸಿರುಗುಪ್ಪದಲ್ಲಿನ ಮನೆಯನ್ನು ಖಾಲಿ ಮಾಡಿರಲಿಲ್ಲ.

ಇಂದು ಅನುಮಾನಸ್ಪದವಾಗಿ ತಹಸೀಲ್ದಾರ್ ಪತ್ನಿ ಮೃತಪಟ್ಟಿದ್ದು, ಸ್ಥಳಕ್ಕೆ ಸಿರುಗುಪ್ಪ ಶಾಸಕ ಸೋಮಲಿಂಗಪ್ಪ ಸೇರಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net