ಬಲ್ಲಮಾವಟಿ ವಲಯ ಕಾಂಗ್ರೆಸ್ ಸಭೆ

ಬಲ್ಲಮಾವಟಿ ವಲಯ ಕಾಂಗ್ರೆಸ್ ಸಭೆ
Published on

ನಾಪೋಕ್ಲು: ಬಲ್ಲಮಾವಟಿ ವಲಯ ಕಾಂಗ್ರೆಸ್ ಸಭೆ ಇಲ್ಲಿನ ಪಿಂಚಣಿದಾರರ ಕಟ್ಟಡದಲ್ಲಿ ವಲಯ ಅಧ್ಯಕ್ಷ ತಾಪಂಡ ಅಪ್ಪಣ್ಣ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.

ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಬಲ್ಲಮಾವಟಿ ವಲಯದ ಗ್ರಾಮಗಳಿಗೆ ನೀಡಿದ ಅನುದಾನದ ಬಗ್ಗೆ ಚರ್ಚಿಸಿ ಪೂರ್ಣಗೊಂಡ ಹಾಗೂ ಪೂರ್ಣಗೊಳ್ಳಲಿರುವ ಕಾಮಗಾರಿಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಮುಂದಿನ ಹಂತದಲ್ಲಿ ಕೈಗೊಳ್ಳಬೇಕಿರುವ ಕಾಮಗಾರಿಯ ಪಟ್ಟಿಯನ್ನು ಆದಷ್ಟು ಬೇಗನೆ ಸಿದ್ಧಪಡಿಸಿ ಶಾಸಕರ ಗಮನಕ್ಕೆ ತರಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಗ್ರಾಮಸ್ಥರ ಕುಂದು ಕೊರತೆ ತಿಳಿಯಲು ಹಾಗೂ ಸಮಸ್ಯೆಗಳನ್ನು ಶಾಸಕರ ಬಳಿ ತಲುಪಿಸಲು ವಲಯ ಮಟ್ಟದ ಸಮಿತಿ ರಚಿಸಲಾಯಿತು.

ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮಚ್ಚುರ ಎಂ.ರವೀಂದ್ರ, ತಾಲೂಕು ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷ ನೆರವಂಡ ಎಂ. ಉಮೇಶ್, ಮಣವಟಿರ ದಯಾಚಿನ್ನಪ್ಪ, ಚಂಗೇಟಿರ ಕುಶಾಲಪ್ಪ, ಕೈಬುಲಿರ ಸಾಬು ಗಣಪತಿ, ಪಾಳೆಯಡ ಅಯ್ಯಪ್ಪ, ಕೋಡಿಯಂಡ ರಾಜೀವಿ, ಮೂವೇರ ನಾಣಪ್ಪ, ಬೊಟ್ಟೋಳಂಡ ಜಾನಕಿ, ಪಾಳೆರ ರಾಣಿ ಅಪ್ಪಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net