ಬಲ್ಲಾಡಿ ದೇವಳ ಜೀರ್ಣೋದ್ಧಾರ ಪೂರ್ವಭಾವಿ ಸಭೆ

hbr (9)
Published on

ಹೆಬ್ರಿ: ಮುದ್ರಾಡಿ ಗ್ರಾಮದ ಬಲ್ಲಾಡಿ ಶ್ರೀ ಅರ್ಧನಾರೀಶ್ವರ ಅಬ್ಬಗ ದಾರಗ ದೇವಸ್ಥಾನ ಮತ್ತು ಬ್ರಹ್ಮ ಬೈದರ್ಕಳ ಗರಡಿಯ ಜೀರ್ಣೋದ್ಧಾರ ಪೂರ್ವಭಾವಿ ಸಭೆ ಮುದ್ರಾಡಿ ಸಮುದಾಯ ಭವನದಲ್ಲಿ ಇತ್ತೀಚಿಗೆ ನಡೆಯಿತು.

ಜೀರ್ಣೋದ್ಧಾರ ಕಾರ್ಯ ಬಗ್ಗೆ ಗ್ರಾಮಸ್ಥರೊಂದಿಗೆ ವ್ಯವಸ್ಥಾಪನಾ ಸಮಿತಿ ಮತ್ತು ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು ಸಮಾಲೋಚನೆ ನಡೆಸಿದರು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಿವ್ಯಸಾಗರ ದಿವಾಕರ ಶೆಟ್ಟಿ ಮಾತನಾಡಿ, ಜುಲೈ 31ರಿಂದ ಆಗಸ್ಟ್ 3ರ ವರೆಗೆ ಪ್ರಾಯಶ್ಚಿತ, ಮುಷ್ಟಿ ಕಾಣಿಕೆ ಕಾರ್ಯಕ್ರಮ ನಡೆಯಲಿದೆ ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ಗಣಪತಿ ಎಂ. ವಾತನಾಡಿ ಗ್ರಾಮಸ್ಥರೆಲ್ಲರೂ ಈ ಪುಣ್ಯ ಕಾರ್ಯದಲ್ಲಿ ಸ್ವಯಂ ಪ್ರೇರಿತರಾಗಿ ತೊಡಗಿಸಿಕೊಳ್ಳಬೇಕು ಎಂದರು.

ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶುಭಧರ ಶೆಟ್ಟಿ, ಮುದ್ರಾಡಿ ಬೆಳಗುಂಡಿ ಶ್ರೀ ಮಹಾಲಿಂಗೇಶ್ವರ ವ್ಯವಸ್ಥಾಪನಾ ಸಮಿತಿ ವಾಜಿ ಅಧ್ಯಕ್ಷ ಅಶೋಕ್ ಕುವಾರ್ ಶೆಟ್ಟಿ, ಗರಡಿ ಮುಕ್ಕಾಲು ಶೆಟ್ರು ಜಯಕರ ಶೆಟ್ಟಿ ಬಲ್ಲಾಡಿ, ಗರಡಿ ಅರ್ಚಕ ಸಂತೋಷ್ ಆರ್. ಪೂಜಾರಿ ಬಲ್ಲಾಡಿ, ದೇವಸ್ಥಾನ ಅರ್ಚಕ ಶ್ರೀಶ ಭಟ್ ಸೂಚನೆ ನೀಡಿದರು.

ಮುದ್ರಾಡಿ ಗ್ರಾಪಂ ಅಧ್ಯಕ್ಷೆ ವಸಂತಿ ಪೂಜಾರಿ, ವ್ಯವಸ್ಥಾಪನಾ ಸಮಿತಿ ವಾಜಿ ಅಧ್ಯಕ್ಷ ಗುರು ಪ್ರಸಾದ್ ಕೊಳಂಬೆ ಉಪಸ್ಥಿತರಿದ್ದರು. ಶ್ರೀಧರ್ ಹೆಬ್ಬಾರ್ ಕಾಪೋಳಿ ಸ್ವಾಗತಿಸಿ, ವಂದಿಸಿದರು. ಬಲ್ಲಾಡಿ ಚಂದ್ರಶೇಖರ ಭಟ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net